Site icon Suddi Belthangady

ಪಡಂಗಡಿ: ಪ.ಜಾತಿ/ಪ.ಪಂಗಡದ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮ

ಪಡಂಗಡಿ: ಗ್ರಾಮ ಪಂಚಾಯತ್‌ ವ್ಯಾಪ್ತಿಯ 2025-26ನೇ ಸಾಲಿನ ಸ್ವಂತ ನಿಧಿಯಿಂದ ಶೇ 25-/- ರ ಪ.ಜಾತಿ ಪ.ಪಂಗಡ ಕುಟುಂಬಗಳಿಗೆ ಮೀಸಲಿಟ್ಟ ಅನುದಾನದಡಿ ಪಡಂಗಡಿ ಮತ್ತು ಗರ್ಡಾಡಿ ಗ್ರಾಮಗಳ ಎಲ್ಲಾ ಪ.ಜಾತಿ ಪ.ಪಂಗಡ ಕುಟುಂಬಗಳಿಗೆ ಚಯರ್‌ ವಿತರಣೆ ಕಾರ್ಯಕ್ರಮ ಅ.4ರಂದು ಗ್ರಾ. ಪಂ. ಅಧ್ಯಕ್ಷ ವಸಂತ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಪಂಚಾಯತ್‌ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಚಾಲ್ತಿ ವರ್ಷದಲ್ಲಿ ಸಂಗ್ರಹವಾದ ಸ್ವಂತ ನಿಧಿಯಿಂದ ಪ.ಜಾತಿ ಪ.ಪಂ ದವರಿಗೆ ನೀಡುವ ಶೇ 25-/- ಅನುದಾನದ ಬಗ್ಗೆ ಜನರಿಗೆ ಪಿಡಿಓ ಸಫನಾ ಅವರು ಸವಿಸ್ತರವಾಗಿ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ ಮುಂದಕ್ಕೆ ಪಡಂಗಡಿ ಪಂಚಾಯತ್ ನ ಸದಸ್ಯ ಸಂತೋಷ ಕುಮಾರ್‌ ಜೈನ್‌ ಅವರು ಮಾತನಾಡಿ, ಪ.ಜಾತಿ ಪ.ಪಂಗಡದ ಏಳಿಗೆಗಾಗಿ ಶ್ರಮಿಸಿದ ಮತ್ತು ಸಂವಿಧಾನವನ್ನು ಸೃಷ್ಟಿಸಿದ ಡಾ.ಬಿ.ಆರ್.ಅಂಬೇಡ್ಕರ್‌ ಅವರನ್ನು ಸ್ಮರಿಸುವುದು ನಮ್ಮ ಅದ್ಯ ಕರ್ತವ್ಯ ಅವರ ಜೀವನ ನಮಗೆಲ್ಲರಿಗೂ ಸ್ಪೂರ್ತಿ ಎಂದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗ್ರಾಮ ಪಂಚಾಯತ್ ನ ಅಧ್ಯಕ್ಷ, ನಾವು ಬಡವ ಶ್ರೀಮಂತ ಎನ್ನುವ ತಾರತಮ್ಯ ನೋಡದೆ ಪಡಂಗಡಿ ಮತ್ತು ಗರ್ಡಾಡಿ ಗ್ರಾಮದ ಪ.ಜಾತಿ ಮತ್ತು ಪ.ಪಂಗಡದ ಎಲ್ಲಾ ಫಲಾನುಭವಿಗಳಿಗೆ ಉಪಯೋಗವಾಗುವ ರೀತಿಯಲ್ಲಿ ನೀಡಿದ್ದೇವೆ ಎಂದು ಸಭೆಯಲ್ಲಿ ಹೇಳಿದರು.

ಗ್ರಾಮ ಪಂ. ಉಪಾಧ್ಯಕ್ಷೆ ವಸಂತಿ, ಸದಸ್ಯರಾದ ರಿಚಾರ್ಡ್ ಗೋವಿಯಸ್‌, ಆಶೋಕ ಸಪಲ್ಯ, ಮೀನಾಕ್ಷಿ, ಯೋಗಿಶ್‌ ಕುಮಾರ್‌ ಡಿ.ಪಿ., ಕೃಷ್ಣಪ್ಪ, ವಿನೋದ, ಶಕುಂತಲಾ, ಗಾಯತ್ರಿ, ವನಜಾಕ್ಷಿ, ಸುಮತಿ ಪಿ. ಮತ್ತು ಶುಭ ಉಪಸ್ಥಿತರಿದ್ದರು. ಪಂಚಾಯತ್‌ ನ ಸಿಬ್ಬಂದಿಗಳು ಸಹಕರಿಸಿದರು. ಸಭೆಯನ್ನು ಕಾರ್ಯದರ್ಶಿ ಗಣೇಶ್‌ ಅವರು ನಿರೂಪಿಸಿದರು.

Exit mobile version