Site icon Suddi Belthangady

ವಿಚಾರಣೆ ಮುಗಿಸಿ SIT ಕಚೇರಿಯಿಂದ ಹೊರ ಬಂದ ಆಂಬ್ಯುಲೆನ್ಸ್ ಚಾಲಕರಾದ ಜಲೀಲ್, ಹಮೀದ್

ಬೆಳ್ತಂಗಡಿ: ನೂರಾರು ಶವಗಳನ್ನು ಹೂತಿಟ್ಟಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಳ್ತಂಗಡಿ ಆಂಬ್ಯುಲೆನ್ಸ್ ಚಾಲಕರಿಬ್ಬರು ಜಲೀಲ್ ಮತ್ತು ಹಮೀದ್ ಅ.6ರಂದು ವಿಚಾರಣೆ ಮುಗಿಸಿ ವಾಪಾಸಾಗಿದ್ದಾರೆ‌.

ಎಷ್ಟು ವರ್ಷದಿಂದ ಕೆಲಸ ಮಾಡ್ತಾಯಿದ್ದೀರಾ, ಏನೆಲ್ಲ ಕೆಲಸ ಮಾಡ್ತಾಯಿದ್ರಿ ಅಂತ ಪ್ರಶ್ನಿಸಿದ ಎಸ್. ಐ. ಟಿ ಪ್ರಶ್ನೆಗೆ ಅನಾಥ ಶವ ಸಿಕ್ಕಿದ್ದ ಬಗ್ಗೆ ಪೊಲೀಸರು ಫೋನ್ ಮಾಡ್ತಾಯಿದ್ರು, ಆಗ ನಾವು ಹೋಗಿ ಹೆಣ ಸಾಗಿಸುವ ಕೆಲಸ ಮಾಡ್ತಾಯಿದ್ವಿ ಎಂದು SIT ಕೇಳಿದ ಎಲ್ಲ ಪ್ರೆಶ್ನೆಗಳಿಗೆ ನಾನು ಉತ್ತರವನ್ನ ಕೊಟ್ಟಿದ್ದೇನೆ. ನಾನು ಚಿನ್ನಯ್ಯನನ್ನ ತುಂಬಾ ಸರಿ ನೋಡಿದ್ದೇವೆ. ಅನಾಥ ಶವಗಳು ಸಿಕ್ಕಿದಾಗ ಚಿನ್ನಯ್ಯ ಕೂಡ ಇರುತ್ತಿದ್ದ, ಆಗ ಪೊಲೀಸರು ಕೂಡ ಇರುತ್ತಿದ್ದರು. ಅವರು ಹೇಳಿದಂತೆ ನಾವು ಮಾಡ್ತಾಯಿದ್ವಿ, ಶವವನ್ನ ಸಾಗಿಸುವ ಮೊದಲು ಫೋಟೋ ತೆಗೆದುಕೊಳ್ಳುತ್ತಿದ್ದರು ಎಂದು ಉತ್ತರಿಸಿದ್ದೇವೆಂದು ತಿಳಿಸಿದಾರೆ. ನಮ್ಮ ಹೇಳಿಕೆಯನ್ನ SIT ಯವರು ವಿಡಿಯೋ ಸ್ಟೇಟ್ಮೆಂಟ್ ಮಾಡಿಕೊಂಡಿದ್ದಾರೆ ಎಂದು ಜಲೀಲ್ ತಿಳಿಸಿದ್ದಾರೆ.

Exit mobile version