Site icon Suddi Belthangady

ತೋಟತ್ತಾಡಿ: ಬೈಲಂಗಡಿ ಶ್ರೀ ಸೋಮನಾಥೇಶ್ವರ ಭಜನಾ ತಂಡದಿಂದ ಧಾರ್ಮಿಕ ಕ್ಷೇತ್ರಗಳ ಪ್ರವಾಸ

ತೋಟತ್ತಾಡಿ: ಬೈಲಂಗಡಿ ಶ್ರೀ ಸೋಮನಾಥೇಶ್ವರ ಭಜನಾ ತಂಡದಿಂದ ಮೂರನೇ ಬಾರಿ ಧಾರ್ಮಿಕ ಕ್ಷೇತ್ರಗಳ ಪ್ರವಾಸವನ್ನು ಹಮ್ಮಿಕೊಳ್ಳಲಾಯಿತು. ಹಾಸನ ಜಿಲ್ಲೆಯ ಸಖರಾಯನ ಪಟ್ಟಣ ಅಯ್ಯನಕೆರೆ ವೀಕ್ಷಿಸಿ, ಹಳೆಬೀಡು ಹೊಯ್ಸಳೇಶ್ವರ ದೇವಸ್ಥಾನ ದೇವಸ್ಥಾನ, ಹೇಮಾವತಿ ಡ್ಯಾಮ್, ನಂತರ ಬೇಲೂರು ಚೆನ್ನಕೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರವಾಸ ಸಂಪನ್ನಗೊಂಡಿತು. ಪ್ರವಾಸದಲ್ಲಿ ಭಜನಾ ತಂಡದ ಸದಸ್ಯರು, ಬೈಲಂಗಡಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ದಿವಾಕರ ಪೂಜಾರಿ ಕಳೆಂಜೊಟ್ಟು, ಸದಸ್ಯರಾದ ಸನತ್ ಕುಮಾರ್ ಮೂರ್ಜೆ, ದಿನೇಶ್ ನಾಯ್ಕ್ ಕೋಟೆ, ವಿಜಯ ಗೌಡ ಅಗರಿ, ಚಂದ್ರಾವತಿ ಗೌಡ ಪರಾರಿ, ಭಜನಾ ಮಂಡಳಿ ಅಧ್ಯಕ್ಷ ಕುಶಾಲಪ್ಪ ಗೌಡ ಅಗರಿ, ಉಪಾಧ್ಯಕ್ಷ ಶ್ರೀನಿವಾಸ ಗೌಡ ಕಲ್ಲರಿಗೆ, ಪ್ರವೀಣ್ ಗೌಡ ಬಾರೆ, ಜಾತ್ರೋತ್ಸವ ಸಮಿತಿಯ ಕಾರ್ಯದರ್ಶಿ ಶಶಿಧರ ಗೌಡ ಪಿತ್ತಿಲು ಉಪಾಧ್ಯಕ್ಷ ಜಯಂತ ಗೌಡ ಪರಾರಿ, ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ಶೋಭಾ ಗೌಡ ಬಳ್ಳಿ, ಜತೆ ಕಾರ್ಯದರ್ಶಿ ದಿವ್ಯ ಗೌಡ ಅಗರಿ ಸದಸ್ಯರಾದ ಶೋಭಾ ಬರಮೇಲು, ಪ್ರೇಮ ಬರಮೇಲು ಮತ್ತು ಭಜನಾ ತಂಡದ ಸದಸ್ಯರ ಹೆತ್ತವರು ಭಾಗವಹಿಸಿದರು.

Exit mobile version