Site icon Suddi Belthangady

ಗರ್ಡಾಡಿ: ಸಂತ ಸೆಬಾಸ್ಟಿಯನ್ ಚರ್ಚ್ ನಲ್ಲಿ ವಾಹನಾಂ ಆಶೀರ್ವಚನ ಕಾರ್ಯಕ್ರಮ

ಗರ್ಡಾಡಿ: ಘಟಕದ ಕಥೊಲಿಕ್ ಸಭಾ ಮೇಲುಸ್ತುವಾರಿಯಲ್ಲಿ ಗರ್ಡಾಡಿ ಸಂತ ಸೆಬಾಸ್ಟಿಯನ್ ಚರ್ಚ್ ಅ. 5ರಂದು ವಾಹನಾಂ ಆಶೀರ್ವಚನ ಕಾರ್ಯಕ್ರಮ ನಡೆಯಿತು. ಚರ್ಚಿನ ಧರ್ಮ ಗುರು ಫಾ. ಸುದೀಪ್ ಸಂತಾನ್ ಗೊನ್ಸಾಲ್ವಿಸ್ ಅವರು ಪ್ರಾರ್ಥನೆ ವಿಧಿ ಮಾಡಿ ವಾಹನಾಂ ಆಶೀರ್ವಾಚನ ಮಾಡಿದರು.

ಘಟಕದ ಅಧ್ಯಕ್ಷ ಓಲ್ವಿನ್ ಮೋನಿಸ್ ಹಾಗೂ ಸಮುದಾಯ್ ಅಭಿವೃದ್ಧಿ ಸಂಚಾಲಕ ಲಿಯೋ ಸಿಕ್ವೇರಾ ಅವರು ವಾಹನವನ್ನು ಶಿಸ್ತಾಗಿ ಇಡಲು ಸಹಕರಿಸಿದರು. ವಾಹನದ ಮಾಲಕರು ಬಲಿ ಪೂಜೆಯಲ್ಲಿ ಕಾಣಿಕೆಯನ್ನು ಆರ್ಪಿಸಿದರು. ಕಥೊಲಿಕ್ ಸಭಾ ಬೆಳ್ತಂಗಡಿ ವಲಯದ ಅಧ್ಯಕ್ಷ ಅಲ್ಬರ್ಟ್ ಸುನಿಲ್ ಮೋನಿಸ್ ಅವರು ಉಪಸ್ಥಿತರಿದ್ದರು.

ವಾಹನಾಂ ಆಶೀರ್ವಾಚನಕ್ಕೆ ಬಂದ ಎಲ್ಲ ಚರ್ಚಿನ ಸದಸ್ಯರಿಗೆ ಸ್ವೀಟ್ಸ್ ಹಂಚಲಾಯಿತು. ಇದರ ಸ್ಫೋನ್ಸರ್ ನವೀನ್ ಮೋನಿಸ್, ಕೊನೆಗೆ ಘಟಕದ ಅಧ್ಯಕ್ಷ ಓಲ್ವಿನ್ ಮೋನಿಸ್ ಎಲ್ಲರಿಗೂ ಧನ್ಯವಾದಗಳನ್ನು ಆರ್ಪಿಸಿದರು.

Exit mobile version