ಬೆಳ್ತಂಗಡಿ: ಅ. 2ರಂದು ಉಪ್ಪಿನಂಗಡಿಯಿಂದ ಕಕ್ಯಪದವು ಸಂಚರಿಸುವ ಜೀವನ್ ಜ್ಯೋತಿ ಬಸ್ ನಲ್ಲಿ ಚಿನ್ನದ ಉಂಗುರ ಒಂದು ಬಸ್ ಮಾಲೀಕ ಅಝೀಝ್ ಅವರ ಕಣ್ಣಿಗೆ ಬಿತ್ತು. ತಕ್ಷಣ ಕೈಗೆತ್ತಿಕೊಂಡು ವಾರಿಸುದಾರರನ್ನು ಹುಡುಕಲು ಶುರು ಮಾಡಿದರು. ಕೊನೆಗೆ ಚಿನ್ನದ ವಾರಿಸುದಾರರನ್ನು ಪತ್ತೆ ಹಚ್ಚಿದ ಡ್ರೈವರ್ ಮುಹಮ್ಮದ್ ಹಾಗೂ ಬಸ್ ಮಾಲೀಕರು ಚಿನ್ನವನ್ನು ಮೂಲ ಮಾಲಿಕರಿಗೆ ವಾಪಾಸ್ ನೀಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.
ಹಲವು ವರ್ಷಗಳಿಂದ ಇದೇ ರೂಟ್ ನಲ್ಲಿ ಸಂಚರಿಸುವ ಈ ಜೀವನ್ ಜ್ಯೋತಿ ಬಸ್ ಎಂದರೆ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ವ್ಯಕ್ತಿಗಳಿಗೂ ಅಚ್ಚು ಮೆಚ್ಚು, ಪ್ರತಿಯೊಬ್ಬ ಪ್ರಯಾಣಿಕರ ಸುರಕ್ಷತೆ ಇವರ ಆದ್ಯತೆ, ಏನೇ ಆಗಲಿ ಮಾನವೀಯತೆ ಮೆರೆದ ಈ ಬಸ್ ಮಾಲೀಕರಿಗೆ ಹಾಗೂ ಬಸ್ ಚಾಲಕರ ಕಾರ್ಯ ಶ್ಲಾಘನೆಗೊಳಗಾಗಿದೆ.