Site icon Suddi Belthangady

ಮುಂಡಾಜೆ: ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನದಲ್ಲಿ ಭಜಕರ ಸಭೆ, ಆಡಳಿತ ಮಂಡಳಿಗೆ ಸದಸ್ಯರ ಆಯ್ಕೆ

ಮುಂಡಾಜೆ: ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನದ ಭಜಕರ ಸಭೆ ಅ. 5ರಂದು ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.ಆಡಳಿತ ಮಂಡಳಿಯ ಅಧ್ಯಕ್ಷ ವಾಸುದೇವ ಗೋಖಲೆ ಅಧ್ಯಕ್ಷತೆ ವಹಿಸಿದ್ದರು.ಅರೆಕಲ್ಲು ರಾಮಚಂದ್ರ ಭಟ್,ಅನಂತ ಭಟ್ ಮಚ್ಚಿಮಲೆ,ರವಿಕಿರಣ ಮರಾಠೆ ಮಾತನಾಡಿ ದೇವಸ್ಥಾನದ ಅಭಿವೃದ್ಧಿಗೆ ಕೈಗೊಳ್ಳಬೇಕಾದ ವಿಚಾರಗಳ ಕುರಿತು ತಿಳಿಸಿದರು.

ಕಳೆದ ಅವಧಿಯ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಮುಂದಿನ 5 ವರ್ಷಗಳ ಅವಧಿಗೆ ದೇವಸ್ಥಾನ ಆಡಳಿತ ಮಂಡಳಿಗೆ ನೂತನ ಸದಸ್ಯರನ್ನಾಗಿಕಜೆ ವೆಂಕಟೇಶ್ವರ ಭಟ್, ಶಶಿಧರ್ ಠೋಸರ್,ಅರೆಕ್ಕಲ್ ರಾಮಚಂದ್ರ ಭಟ್, ವಾಸುದೇವ ಗೋಖಲೆ, ಅಶ್ವಿನಿ ಎ.ಹೆಬ್ಬಾರ್, ವಿಜಯ ಕುಮಾರ್ ರೈ, ಉಷಾ ಫಡಕೆ, ಚಂದ್ರಕಾಂತ ಪ್ರಭು, ಚೆನ್ನಕೇಶವ ನಾಯ್ಕ, ಶೀನಪ್ಪ ಗೌಡ, ಶಶಾಂಕ ಮರಾಠೆ ಅವರನ್ನು ಆಯ್ಕೆ ಮಾಡಲಾಯಿತು.

ಖಾಯಂ ಗೌರವಾಧ್ಯಕ್ಷರಾಗಿ ಜಗದೀಶ ಫಡಕೆ ಮುಂದುವರಿಯಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಬಾಬು ಪೂಜಾರಿ ಮತ್ತು ಋತುಪರ್ಣ ಡೋಂಗ್ರೆ ಆಯ್ಕೆಯಾದರು. ಅಡೂರು ವೆಂಕಟ್ರಾಯ ಸ್ವಾಗತಿಸಿದರು. ಬಾಬು ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

Exit mobile version