Site icon Suddi Belthangady

ಸೌತಡ್ಕ ಮಹಾಗಣಪನ ಕ್ಷೇತ್ರಕ್ಕೆ ಭಕ್ತರ ದಂಡು!

ಕೊಕ್ಕಡ: ಸರಣಿ ಸರಕಾರಿ ರಜೆಯ ಹಿನ್ನೆಲೆಯಲ್ಲಿ ಶನಿವಾರ ಹಾಗೂ ಭಾನುವಾರದಂದು ವಿಶ್ವವಿಖ್ಯಾತ ಕೊಕ್ಕಡ ಗ್ರಾಮದ ಸೌತಡ್ಕ ಮಹಾಗಣಪತಿ ದೇಗುಲದಲ್ಲಿ ಭಕ್ತರ ದಂಡು ಕಂಡುಬಂತು.

ಪ್ರತಿದಿನ ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಭಕ್ತರು ಮಹಾಗಣಪನ ದರ್ಶನ ಪಡೆದು ಭಕ್ತಿಭಾವದಿಂದ ತೇಲಿದರು.

ದೇವಾಲಯದ ಸುತ್ತಮುತ್ತ ಭಕ್ತರ ದೀರ್ಘ ಸರತಿಗಳು, ನಾಮಸ್ಮರಣೆ ಮತ್ತು ಭಕ್ತಿಗೀತೆಗಳು ಕೇಳಿ ಬಂದವು. ದೇವಸ್ಥಾನದ ವತಿಯಿಂದ ಆಡಳಿತ ಮಂಡಳಿಯವರು ಸರ್ವ ರೀತಿಯ ವ್ಯವಸ್ಥೆಯನ್ನು ಭಕ್ತಾದಿಗಳಿಗೆ ಕಲ್ಪಿಸಿದರು

Exit mobile version