ಮಿಯ್ಯಾರು: ವನದುರ್ಗಾಪರಮೇಶ್ವರಿ ದೇವಳದ ಆಡಳಿತ ಮಂಡಳಿಯವರು ಊರಿನ ಧಾರ್ಮಿಕ ಶ್ರದ್ದಾ ಕೇಂದ್ರಗಳಾದ ಮಂದಿರ, ಮಸೀದಿ, ಚರ್ಚ್ ಹಾಗೂ ದೇವಸ್ಥಾನಗಳನ್ನು ನಾಶ ಮಾಡುತ್ತಿದ್ದಾರೆ ಇವರು ಸರ್ವ ನಾಶ ಆಗಿ ಹೋಗುತ್ತಾರೆ ಎಂದು ಪುದುವೆಟ್ಟು ಗ್ರಾಮದ ಸೋಯಿ ಜೋಸೆಫ್ ಎಂಬಾತ ಊರಿನಲ್ಲಿರುವ ವಿವಿಧ ವಾಟ್ಸಾಪ್ ಗ್ರೂಪ್ ಗಳಲ್ಲಿ ಸತ್ಯಕ್ಕೆ ದೂರವಾದ ಮತ್ತು ಕೋಮು ಸಂಘರ್ಷಕ್ಕೆ ಕಾರಣವಾಗುವಂತ ವಿಷಯಗಳನ್ನು ಹರಿ ಬಿಟ್ಟಿದ್ದು, ಈತನಿಗೆ ಬುದ್ದಿವಾದ ಹೇಳುವಂತೆ ಮತ್ತು ಇನ್ನುಮುಂದೆ ಇಂತಹ ಅಪ ಪ್ರಚಾರದ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸದಂತೆ ಸಂತ ಮರಿಯಮ್ಮನವರ ದೇವಾಲಯದ ಧರ್ಮಗುರುಗಳಿಗೆ ಮನವಿ ಪತ್ರವನ್ನು ಶ್ರೀ ವನದುರ್ಗಾಪರಮೇಶ್ವರಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಬೊಮ್ಮಣ್ಣ ಗೌಡ ಉಪಾಧ್ಯಕ್ಷ ಜನಾರ್ಧನ ಪೂಜಾರಿ, ಕಾರ್ಯದರ್ಶಿ ಸಂತೋಷ್ ಕೆ.ಸಿ, ಪೂಜಾ ಸಮಿತಿ ಅಧ್ಯಕ್ಷ ಗುರುಪ್ರಸಾದ್, ಸದಸ್ಯರಾದ ಸೋಮನಾಥ್ ಗೌಡ, ನಾರಾಯಣ ನಾಯ್ಕ್, ಹರಿಣಾಕ್ಷಿ ಭಕ್ತಾದಿಗಳಾದ ರಾಮಣ್ಣ ಪೂಜಾರಿ ಬಾಯಿತ್ಯಾರು, ರೇಖಾನಾಥ ಪೂಜಾರಿ, ಮೋಹನ ಗೌಡ, ಸ್ವಾತಿನ್, ಜಗದೀಶ್ ಗುಂಡ್ಯ, ಶ್ರವಣ್ ಪೂಜಾರಿ ಬಾಯಿತ್ಯಾರು ಇನ್ನೂ ಹಲವು ಭಕ್ತರು ಉಪಸ್ಥಿತರಿದ್ದು ಪತ್ರವನ್ನು ಧರ್ಮಗುರುಗಳಿಗೆ ನೀಡಿದರು.
ವಾಟ್ಸಾಪ್ ಗ್ರೂಪ್ ನಲ್ಲಿ ಧಾರ್ಮಿಕ ಭಾವನೆಗೆ ದಕ್ಕೆ ತರಲು ಪ್ರಯತ್ನಿಸಿದ “ಸೋಯಿ ಜೋಸೆಫ್” ವಿರುದ್ಧ-ಪುದುವೆಟ್ಟು ಸಂತ ಮರಿಯಮ್ಮನವರ ದೇವಾಲಯದ ಧರ್ಮಗುರುಗಳಿಗೆ ದೂರು-ಮಿಯ್ಯಾರು ವನದುರ್ಗಾಪರಮೇಶ್ವರಿ ದೇವಳದ ಆಡಳಿತ ಮಂಡಳಿ ಮತ್ತು ಭಕ್ತ ವೃಂದದಿಂದ ದೂರು ಸಲ್ಲಿಕೆ
