ಉಜಿರೆ: ಮಂಗಳೂರು ಮಕ್ಕಳ ದಸರಾ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉಜಿರೆ ಎಸ್.ಡಿ.ಎಂ ಕಾಲೇಜಿನ ಕಲಾ ಕೇಂದ್ರದ ವಿದ್ಯಾರ್ಥಿಗಳು “ಎಸ್.ಡಿ.ಎಂ ಕಲಾವೈಭವ” ಸಾಂಸ್ಕೃತಿಕ ಕಾರ್ಯಕ್ರಮವನ್ನು ಸೆ. 28ರಂದು ಕುದ್ರೋಳಿ ಶ್ರೀ ಗೋಕರ್ಣಥೇಶ್ವರ ದೇವಸ್ಥಾನದಲ್ಲಿ ನೀಡಿ ಎಲ್ಲಾ ವೀಕ್ಷಕರ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮದಲ್ಲಿ ಮೋಹಿನಿಯಾಟ್ಟಮ್, ಭರತನಾಟ್ಯ, ಪ್ಲೆಮಿಂಕೋ, ಗಾರ್ಭದಾಂಡ್ಯ, ಕಥಕ್, ತೈಯಂ, ಕಲಿಂಕ, ಜೊತೆಗೆ ವಿವಿಧ ರಾಜ್ಯಗಳ ಸಂಸ್ಕೃತಿಯನ್ನು ಬಿಂಬಿಸುವ ಪ್ಯೂಷನ್ ನೃತ್ಯ ಮತ್ತು 20 ನಿಮಿಷಗಳ ವಿವಿಧ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವಿವಿಧ ಪ್ರಕಾರಗಳನ್ನೊಳಗೊಂಡ ಶ್ರೀ ರಾಮ ಪಟ್ಟಾಭಿಷೇಕ ಮೂಲಕ ಸಂಪೂರ್ಣ ರಾಮಾಯಣವನ್ನು ಒಟ್ಟು 170 ವಿದ್ಯಾರ್ಥಿಗಳು ಪ್ರದರ್ಶನ ನೀಡಿದ್ದು, ಎಲ್ಲಾ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.