Site icon Suddi Belthangady

ಅರಸಿನಮಕ್ಕಿ: ಸ. ಪ್ರೌಢ ಶಾಲೆ ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷರಾಗಿ ವಾಮನ ತಾಮ್ಹ ನ್ ಕರ್ ಆಯ್ಕೆ

ಅರಸಿನಮಕ್ಕಿ: ಸುಮಾರು 57 ವರ್ಷಗಳನ್ನು ಪೂರೈಸಿ ಸಾವಿರಾರು ಮಕ್ಕಳು ವಿದ್ಯಾರ್ಜನೆ ಮಾಡಿರುವ ಅರಸಿನಮಕ್ಕಿ ಸರಕಾರಿ ಪ್ರೌಢಶಾಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಹಳೆ ವಿದ್ಯಾರ್ಥಿ ಸಂಘವನ್ನು ಅ. 4ರಂದು ರಚಿಸಲಾಯಿತು.

ನೂತನ ಅಧ್ಯಕ್ಷರಾಗಿ ಉದ್ಯಮಿ ವಾಮನ ತಾಮ್ಹನ್ ಕರ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಉದ್ಯಮಿ ಪ್ರಕಾಶ್ ಪಿಲಿಕ್ಕಬೆ, ಶಿವಾನಂದ ಮಯ್ಯ, ಸಂದೀಪ್ ಅಮ್ಮುಡಂಗೆ, ಹರೀಶ್ ಯು., ರಾಜು ಕೆ. ಸಾಲಿಯಾನ್ ಮತ್ತು ವೃಷಾಂಕ್ ಖಾಡಿಲ್ಕರ್ ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯದರ್ಶಿಗಳಾಗಿ ಮುಖ್ಯಶಿಕ್ಷಕಿ ಮಂಜುಳಾ, ಜೊತೆ ಕಾರ್ಯದರ್ಶಿಯಾಗಿ ಚೇತನಾ ಕುಮಾರಿ, ಶರತ್ ತುಳುಪುಳೆ ಹಾಗೂ ಸದಸ್ಯರಾಗಿ ಶ್ರೀರಂಗ ದಾಮಲೆ, ಸುಧೀರ್ ಕುಮಾರ್ ಎಂ. ಎಸ್., ಕೇಶವ ರಾವ್ ನೆಕ್ಕಿಲು, ಜಯರಾಮ ನೆಲ್ಲಿತ್ತಾಯ ಶಿಶಿಲ, ಶಶಾಂಕ್, ಗಣೇಶ್ ಕೆ. ಹೊಸ್ತೋಟ, ಮುರಳೀಧರ ಶೆಟ್ಟಿಗಾರ್, ಭವ್ಯ, ತೇಜಸ್ವಿನಿ, ರೇಷ್ಮಾ, ಯಮುನಾರವರನ್ನು ಆಯ್ಕೆ ಮಾಡಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್ ಕುಲಾಲ್ ವಹಿಸಿದ್ದರು. ಮುಖ್ಯ ಶಿಕ್ಷಕಿ ಮಂಜುಳಾ ಎಂ. ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ವಿಜ್ಞಾನ ಶಿಕ್ಷಕಿ ಶ್ರೀಚೇತನ ಕಾರ್ಯಕ್ರಮ ನಿರೂಪಿಸಿದರು.

Exit mobile version