ಅಳದಂಗಡಿ: ಪೇಟೆಯ ಮುಖ್ಯ ರಸ್ತೆಯಲ್ಲಿ ಮಹಿಳೆಯೊಬ್ಬರು ಅಡ್ಡಬಂದ ಪರಿಣಾಮ ಟೆಂಪೋ ಟ್ರಾವೆಲ್ಲರ್ ವಾಹನ ಪಲ್ಟಿಯಾದ ಘಟನೆ ಅ.4ರಂದು ಮಧ್ಯಾಹ್ನ ನಡೆದಿದೆ. ನಾರಾವಿ ಕಡೆಯಿಂದ ಗುರುವಾಯನಕೆರೆ ಕಡೆ ಟೆಂಪೋ ಟ್ರಾವೆಲ್ಲರ್ ಬರುತ್ತಿರುವಾಗ ಅಳದಂಗಡಿ ಮುಖ್ಯ ರಸ್ತೆಯಲ್ಲಿ ಮಹಿಳೆಯೊಬ್ಬರು ಸಡನ್ನಾಗಿ ಅಡ್ಡ ಬಂದಿದ್ದು, ಮಹಿಳೆಯನ್ನು ಬಚಾವ್ ಮಾಡಲೆತ್ನಿಸಿ ಟೆಂಪೋ ಟ್ರಾವೆಲರ್ ಪಲ್ಟಿಯಾಗಿದೆ.
ಮಹಿಳೆಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.