Site icon Suddi Belthangady

ಬುರುಡೆ ಪ್ರಕರಣ: ಇಬ್ಬರು ಆಂಬ್ಯುಲೆನ್ಸ್ ಚಾಲಕರಿಗೆ ಎಸ್.ಐ.ಟಿ ಬುಲಾವ್-ವಿಚಾರಣೆಗೆ ಬಂದ ಜಲೀಲ್ ಬಾಬಾ

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ, ಹಲವಾರು ವರ್ಷಗಳಿಂದ ಆಂಬ್ಯುಲೆನ್ಸ್ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಜಲೀಲ್ ಹಾಗೂ ಹಮೀದ್ ಎಂಬವರಿಗೆ ಎಸ್. ಐ. ಟಿ‌. ನೋಟೀಸ್ ನೀಡಿದೆ.

ಈ ಸಂಬಂಧ ಜಲೀಲ್ ಬಾಬಾ ಅವರು ತನ್ನ ಆಂಬ್ಯುಲೆನ್ಸ್ ನಲ್ಲೇ ವಿಚಾರಣೆಗೆ ಅ.4ರಂದು ಆಗಮಿಸಿದ್ದಾರೆ. ಚಿನ್ನಯ್ಯ ಆರೋಪಿಸಿದ ಅವಧಿಯಲ್ಲಿ ನಡೆದ ಯು.ಡಿ.ಆರ್. ಪ್ರಕರಣಗಳಿಗೆ ಸಂಬಂಧಿಸಿದಂತೆ ಶವವನ್ನು ಆಸ್ಪತ್ರೆಗೆ ಸಾಗಿಸಿರುವ ಬಗ್ಗೆ ಆಂಬ್ಯುಲೆನ್ಸ್ ಚಾಲಕರ ಹೇಳಿಕೆಯನ್ನು ಎಸ್.ಐ.ಟಿ ಪಡೆಯಲಿದೆ.

Exit mobile version