Site icon Suddi Belthangady

ನಾಳದಲ್ಲಿ ಶ್ರೀ ದುರ್ಗಾ ಭಕ್ತಿ ಭಜನೆ

ಗೇರುಕಟ್ಟೆ: ನಾಳ ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅ.2ರಂದು ವಿಜಯದಶಮಿ ಶುಭದಿನದಂದು ಶ್ರೀ ದುರ್ಗಾಭಕ್ತಿ ಭಜನೆ (ಕುಳಿತು ಪಾಡಲು ನಿಲುವ )ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು.
ಹಾಡುಗರಿಕೆಯಲ್ಲಿ ಸತೀಶ್ ಭಂಡಾರಿ ನಾಳ, ಚೈತ್ರ ಮೈರಲಿಕೆ, ಪುಷ್ಪ ಕರತ್ತುರು, ಸಾಕ್ಷಿ, ಪ್ರಿಯಾ, ಅವಿನ್ಯು, ನೃತ್ಯದಲ್ಲಿ ಧರಿತ್ರಿ ನಾರಾವಿ ಭಾಗವಹಿಸಿದ್ದರು.

ಹಾರ್ಮೋನಿಯಂ ವಾದಕರಾಗಿ ರವಿರಾಜ್ ಉಜಿರೆ, ತಬಲದಲ್ಲಿ ವಿಶಾಕ್, ರಿಧಮ್ ಪಾಡ್ ನಲ್ಲಿ ಅಶೋಕ್ ಮೂಡಬಿದ್ರೆ ಸಹಕರಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಬೆರ್ಕೆತೋಡಿ, ಸಮಿತಿ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.

Exit mobile version