ಶಿಶಿಲ: ಅಡ್ಡಹಳ್ಳ ದೀಪಾವಳಿ ಹಬ್ಬ – ಹಗ್ಗ ಜಗ್ಗಾಟ ಸೀಸನ್ 2 ಇದರ ಆಮಂತ್ರಣ ಪತ್ರಿಕೆಯನ್ನು ಶಾಸಕ ಹರೀಶ್ ಪೂಂಜ ಬಿಡುಗಡೆಗೊಳಿಸಿದರು. ಈ ಕಾರ್ಯಕ್ರಮ ಅ. 19ರಂದು ನಡೆಯಲಿದ್ದು ದೊಡ್ಡ ಮಟ್ಟದಲ್ಲಿ ದೋಸೆ ಹಬ್ಬ ಮತ್ತು ಹೊನಲು ಬೆಳಕಿನಲ್ಲಿ 500+5ಕೆಜಿ ವಿಭಾಗದ 7ಜನರ ಲೆವೆಲ್ ಮಾದರಿಯ ಹಗ್ಗ ಜಗ್ಗಾಟ ಮತ್ತು ಸ್ಥಳೀಯ ಪುರುಷ ಮತ್ತು ಮಹಿಳೆಯರಿಗೆ ಹಗ್ಗ ಜಗ್ಗಾಟ ನಡೆಯಲಿದೆ.
ಆಮಂತ್ರಣ ಪತ್ರಿಕೆ ಬಿಡುಗಡೆ ಸಂಧರ್ಭದಲ್ಲಿ ಆಯೋಜಕ ಕರುಣಾಕರ ಶಿಶಿಲ, ಸ್ಥಳೀಯ ಮುಖಂಡ ಕೊರಗಪ್ಪ ಗೌಡ, ಪಂಚಾಯತ್ ಮಾಜಿ ಅಧ್ಯಕ್ಷ ಸಂದೀಪ್ ಅಮ್ಮುಡಂಗೆ, ರಾಧಾಕೃಷ್ಣ ಗುತ್ತು, ಸುಬ್ರಾಯ ಗೌಡ, ಶಿವಾನಂದ, ಹರಿಪ್ರಸಾದ್ ಬದಿಗುಡ್ಡೆ, ರಮೇಶ್ ನಾಯ್ಕ್ ಬದಿಗುಡ್ಡೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.