ಬೆಳ್ತಂಗಡಿ: ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ವಿಧಾನಪರಿಷತ್ ಮಾಜಿ ಸದಸ್ಯರೂ ಆಗಿರುವ ಬೆಳ್ತಂಗಡಿ ಕಿನ್ನಿಂಜದ ಕೆ.ಹರೀಶ್ ಕುಮಾರ್ ಮೆಸ್ಕಾಂ ಚೇರ್‌ಮನ್ ಆಗಿ ಅಕ್ಟೋಬರ್ ೧ರಂದು ಮಂಗಳೂರಿನ ಬಿಜೈಯಲ್ಲಿರುವ ಮೆಸ್ಕಾಂ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.
೧೯೭೮ರಲ್ಲಿ ಕಾರ್ಯಕರ್ತನಾಗಿ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಆರಂಭಿಸಿದ ಹರೀಶ್ ಕುಮಾರ್ ೧೯೮೦ರಲ್ಲಿ ಬೆಳ್ತಂಗಡಿ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ, ೧೯೮೧ರಲ್ಲಿ ಬೆಳ್ತಂಗಡಿ ಲ್ಯಾಂಡ್ ಟ್ರಿಬ್ಯುನಲ್ ಸದಸ್ಯರಾಗಿ, ೧೯೮೪ರಿಂದ ೧೯೮೬ರವರೆಗೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ, ೨೦೦೪ರಿಂದ ೨೦೧೭ರವರೆಗೆ ಮತ್ತೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ೧೯೮೬ರಿಂದ ೧೯೯೦ರವರೆಗೆ ದಕ್ಷಿಣ ಕನ್ನಡ ಯೂತ್ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದ ಇವರು ೧೯೮೭ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯನಾಗಿ ಆಯ್ಕೆಯಾದರು. ೧೯೯೩ರಿಂದ ೨೦೦೦ದವರೆಗೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ೨೦೦೦ದಲ್ಲಿ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಉಪಾಧ್ಯಕ್ಷರಾಗಿ ಮತ್ತು ಮೆಂಬರ್ ಆಫ್ ಅಕಾಡೆಮಿಕ್ ಕೌನ್ಸಿಲ್‌ನಲ್ಲೂ ಸೇವೆ ಸಲ್ಲಿಸಿರುವ ಇವರಿಗೆ ೧೯೮೯ರಲ್ಲಿ ಇವರಿಗೆ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಕೊನೆಯ ಕ್ಷಣದಲ್ಲಿ ಅವಕಾಶ ಕೈ ತಪ್ಪಿತ್ತು.
೨೦೦೪ರಲ್ಲಿ ಶಾಸಕ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ೨೦೧೭ರಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಹರೀಶ್ ಕುಮಾರ್ ೨೦೧೮ರಿಂದ ೨೦೨೪ರವರೆಗೆ ವಿಧಾನ ಪರಿಷತ್ ಸದಸ್ಯನಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೃಷಿ ಮತ್ತು ಸಹಕಾರಿ ಕ್ಷೇತ್ರದಲ್ಲಿಯೂ ಸಾಧನೆಗೈದಿರುವ ಇವರು ಕೃಷಿಪತ್ತಿನ ಸಹಕಾರಿ ಸಂಘ ಬೆಳ್ತಂಗಡಿಯ ಅಧ್ಯಕ್ಷರಾಗಿ, ನಿರ್ದೇಶಕರಾಗಿ, ಸಿ.ಎ. ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು ಪ್ರಸ್ತುತ ಬೆಳ್ತಂಗಡಿಯ ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಕರ್ನಾಟಕ ಸರಕಾರ ಹೊಸದಾಗಿ ಸೃಷ್ಠಿಸಿರುವ ಮೆಸ್ಕಾಂನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಪಕ್ಷ ನಿಷ್ಠೆಗೆ ಸಿಕ್ಕಿದ ಮತ್ತೊಂದು ಜವಾಬ್ದಾರಿ: ೪೮ ವರ್ಷದಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ವಿವಿಧ ಸ್ತರಗಳಲ್ಲಿ ಕೆಲಸ ಮಾಡಿzನೆ. ಯೂತ್ ಕಾಂಗ್ರೆಸ್ ಜವಾಬ್ದಾರಿಯಿಂದ ಹಿಡಿದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನವರೆಗೂ ಕೊಟ್ಟ ಪ್ರತಿ ಜವಾಬ್ದಾರಿಯನ್ನೂ ಪ್ರಾಮಾಣಿಕತೆಯಿಂದ ನಿಷ್ಠಾವಂತನಾಗಿ ಸರಿಯಾಗಿ ನಿಭಾಯಿಸಿzನೆ. ೧೯೮೯ರಲ್ಲಿ ಶಾಸಕ ಸ್ಥಾನಕ್ಕೆ ನನಗೆ ಬಿ ಫಾರ್ಮ್ ಕೊಟ್ಟು ಕೊನೇಯ ಕ್ಷಣದಲ್ಲಿ ಬದಲಾಯಿಸಿದರು. ಆದರೂ ನಾವು ಪಕ್ಷ ಬಿಟ್ಟು ಹೋಗಿಲ್ಲ. ನನ್ನ ಪಕ್ಷ ನಿಷ್ಠೆಯಿಂದಾಗಿಯೇ ವಿಧಾನಪರಿಷತ್ ಸದಸ್ಯ ಸ್ಥಾನ ನೀಡಿದರು. ಈಗ ಮೆಸ್ಕಾಂ ಚೇರ್‌ಮನ್ ಹುದ್ದೆ ನೀಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾದ ನಂತರ ಬೆಳ್ತಂಗಡಿ ಬಿಟ್ಟು ಮಂಗಳೂರಿನಲ್ಲೇ ಮನೆ ಮಾಡಿಕೊಂಡು ಜವಾಬ್ದಾರಿ ನಿಭಾಯಿಸುತ್ತಿzನೆ. ಕಾಂಗ್ರೆಸ್ ನಾಯಕರ ಪ್ರೋತ್ಸಾಹದಿಂದ ಈಗ ಮೆಸ್ಕಾಂ ಚೇರ್‌ಮನ್ ಆಗಿ ನೇಮಕಗೊಂಡಿzನೆ. ಇಲ್ಲಿಯೂ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತೇನೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಬದಲಾವಣೆ ಬಗ್ಗೆ ಪಕ್ಷ ಚಿಂತನೆ ಮಾಡುತ್ತಿದ್ದು ಶೀಘ್ರದಲ್ಲೇ ನಡೆಯಲಿದೆ.
-ಕೆ.ಹರೀಶ್ ಕುಮಾರ್, ಅಧ್ಯಕ್ಷರು ಮೆಸ್ಕಾಂ