Site icon Suddi Belthangady

ಎಕ್ಸೆಲ್ ಉಪನ್ಯಾಸಕರಿಂದ ಸಾಂಸ್ಕೃತಿಕ ವೈಭವ

ಗುರುವಾಯನಕೆರೆ: ಎಕ್ಸೆಲ್ ಪಿಯು ಕಾಲೇಜಿನಲ್ಲಿ ಗುರುನಮನ ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ಸಾಂಸ್ಕೃತಿಕ ಹಬ್ಬದ ವಾತಾವರಣವನ್ನು ಸೃಷ್ಟಿಸಿದರು.

ಸಂಸ್ಕೃತ ಭಾಷಾ ಉಪನ್ಯಾಸಕರಾದ ರಘು ಬಿಜೂರು ಅವರು ತಮ್ಮ ತಂಡದ ವತಿಯಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅನೇಕ ಉಪನ್ಯಾಸಕರು ತಂಡಗಳಾಗಿ ವೈವಿದ್ಯಮಯ ಕಾರ್ಯಕ್ರಮಗಳ ಜೊತೆಗೆ ಇಂಪಾದ ಹಾಡುಗಳನ್ನು ಹಾಡುವ ಮೂಲಕ ವಿದ್ಯಾರ್ಥಿ, ಪೋಷಕರ ಮನರಂಜಿಸಿದರು. ವಿನೂತನ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದ ಈ ಸಾಂಸ್ಕೃತಿಕ ಹಬ್ಬದಲ್ಲಿ ನಿಲಯ ಪಾಲಕರು ಮತ್ತು ಬೋಧಕೇತರ ಸಿಬ್ಬಂದಿಯವರು ಭಾಗವಹಿಸಿದ್ದು ಗಮನ ಸೆಳೆಯಿತು.

ಈ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಉಪನ್ಯಾಸಕ ವರ್ಗದವರೇ ಸೇರಿಕೊಂಡು ಶ್ರೀ ದೇವಿ ಮಹಾತ್ಮೆ-ಮಹಿಷ ಮರ್ದಿನಿ ಎನ್ನುವ ಯಕ್ಷಗಾನ ಪ್ರಸಂಗವನ್ನು ನಡೆಸಿಕೊಟ್ಟರು. ಭಾಗವತರಾಗಿ ರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಈಶ್ವರ ಶರ್ಮ, ಮದ್ದಳೆಯಲ್ಲಿ ಸಂಸ್ಕೃತ ವಿಭಾಗದ ವೆಂಕಟೇಶ್, ಚೆಂಡೆಯಲ್ಲಿ ವಿದ್ಯಾರ್ಥಿ ಅತುಲ್ ಕೃಷ್ಣ ಸಹಕರಿದರು. ದೇವೇಂದ್ರನಾಗಿ ಕನ್ನಡ ವಿಭಾಗದ ಮುಖ್ಯಸ್ಥ ಜಯರಾಮ್, ದೇವ ಬಲಗಳಾಗಿ ಕನ್ನಡ ವಿಭಾಗದ ಚರಣ್ ಮತ್ತು ಕಚೇರಿ ಸಹಾಯಕರಾದ ಜಯಪ್ರಕಾಶ್, ಮಹಿಷಾಸುರನಾಗಿ ಗಣಕ ವಿಜ್ಞಾನ ವಿಭಾಗದ ವಿನಯ್, ಬಣ್ಣದ ಬಲಗಳಾಗಿ ಆಡಳಿತಾಧಿಕಾರಿ ಕೀರ್ತಿನಿಧಿ ಜೈನ್, ರಸಾಯನ ವಿಜ್ಞಾನ ವಿಭಾಗದ ಶಿವರಾಜ್, ನಿಲಯ ಪಾಲಕ ಸುನಿಲ್, ಬ್ರಹ್ಮನಾಗಿ ಕ್ಯಾಂಪಸ್ ಮ್ಯಾನೇಜರ್ ಶಾಂತಿರಾಜ್ ಜೈನ್, ವಿಷ್ಣು ಮತ್ತು ಮಾಲಿನಿ ದೂತನಾಗಿ ಜೀವ ವಿಜ್ಞಾನ ವಿಭಾಗದ ಪ್ರಜ್ವಿತ್ ರೈ, ಈಶ್ವರನಾಗಿ ರಸಾಯನ ವಿಜ್ಞಾನ ವಿಭಾಗದ ಪ್ರದೀಪ್ ನಾಗ್, ಮಾಲಿನಿಯಾಗಿ ಆಪ್ತ ಸಮಾಲೋಚನಾ ವಿಭಾಗದ ದುರ್ಗಾ ಪರಮೇಶ್ವರ, ಸುಪಾರ್ಶ್ವ ಮುನಿಯಾಗಿ ಕನ್ನಡ ವಿಭಾಗದ ಸಂಜೀವ್, ಸಿಂಹನಾಗಿ ಕಚೇರಿ ಸಹಾಯಕರಾದ ಗಣೇಶ, ಶ್ರೀದೇವಿಯಾಗಿ ಶೈಕ್ಷಣಿಕ ಸಂಯೋಜಕಿ ನಿಶಾ ಪೂಜಾರಿ ಭಾಗವಹಿಸಿದ್ದರು.

ಉಪನ್ಯಾಸಕರು ತಮ್ಮ ಪಾತ್ರಗಳನ್ನು ಅತ್ಯಂತ ಸೊಗಸಾಗಿ ಅಭಿನಯಿಸಿದರು. ರಾಜ್ಯದ ವಿವಿಧ ಮೂಲೆಗಳಿಂದ ಬಂದಿದ್ದ ಅನೇಕ ಪೋಷಕರು ಎಕ್ಸೆಲ್ ಸಾಂಸ್ಕೃತಿಕ ವೈಭವವನ್ನು ಮನ ತುಂಬಿಕೊಂಡಿದ್ದಲ್ಲದೆ ಸಂತಸವನ್ನು ವ್ಯಕ್ತಪಡಿಸಿದರು. ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲ ಡಾ. ನವೀನ್ ಕುಮಾರ್ ಮರಿಕೆ, ಡಾ.ಪ್ರಜ್ವಲ್ ಕಜೆ, ಪ್ರಾಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

Exit mobile version