Site icon Suddi Belthangady

ಅ.2: ಮುಂಬೈ ಶಾರದೋತ್ಸವದ ಶೋಭಾಯಾತ್ರೆಯಲ್ಲಿ ಕುಣಿತ ಭಜನೆ, ಜಡೆ ಕೋಲಾಟ, ಕಂಸಾಳೆ ಪ್ರದರ್ಶನ ನೀಡಲು ವಿ. ಹರೀಶ್ ನೆರಿಯ ಸಾರಥ್ಯದಲ್ಲಿ ಬೆಳ್ತಂಗಡಿ ಭಕ್ತಿ ಹೆಜ್ಜೆ ಬಳಗ ಭಜಕರು

ಬೆಳ್ತಂಗಡಿ: ಪಶ್ಚಿಮ ವಿಭಾಗ ಮುಂಬೈ ಸಾರ್ವಜನಿಕ ನವರಾತ್ರಿ ಮಂಡಳಿ ಡೊಂಬಿವಿಲಿಯ 61ನೇ ವರ್ಷದ ಶಾರದೋತ್ಸವದ ಭವ್ಯ ಶೋಭಯಾತ್ರೆಯು ಅ. 2ರಂದು ನಡೆಯಲಿದ್ದು. ಈ ಶೋಭಯಾತ್ರೆಯಲ್ಲಿ ಕುಣಿತ ಭಜನೆ, ಜಡೇಕೋಲಾಟ, ಕಂಸಾಲೆ ನೃತ್ಯ ಪ್ರದರ್ಶನ ನೀಡಲು ಭಕ್ತಿ ಹೆಜ್ಜೆ ಬಳಗಕ್ಕೆ ಪ್ರಾಯೋಜಕತ್ವ ನೀಡಿ ಸಮಿತಿಯವರು ಆಹ್ವಾನ ನೀಡಿದ್ದು ಇದರಂತೆ ಕುಣಿತ ಭಜನಾ ಗುರುಗಳು ಮತ್ತು ಭಕ್ತಿ ಹೆಜ್ಜೆ ಬಳಗ ಬೆಳ್ತಂಗಡಿಯ ಸಂಚಾಲಕ ವಿ. ಹರೀಶ್ ನೆರಿಯ ಸಾರಥ್ಯದಲ್ಲಿ ಭಕ್ತಿ ಹೆಜ್ಜೆ ಬಳಗ ಬೆಳ್ತಂಗಡಿಯ 62 ಭಜಕ ಸದಸ್ಯರು ಮುಂಬೈಗೆ ತೇರಳ್ತಾ ಇದ್ದಾರೆ.

ಭಕ್ತಿ ಹೆಜ್ಜೆ ಬಳಗ ಭಜಕರು ಅ. 2ರಂದು ಶಾರದೋತ್ಸವದ ಶೋಭಯಾತ್ರೆ, ಅ. 3ರಂದು ನಿತ್ಯಾನಂದ ಮಂದಿರ ಗಣೇಶ್ ಪುರಿ ಮುಂಬೈ ಹಾಗೂ ಮಹಾಲಕ್ಷ್ಮಿ ದೇವಸ್ಥಾನ ಘನ್ಸೋಲಿ ಮುಂಬೈಯಲ್ಲಿ ಕುಣಿತ ಭಜನಾ ಸೇವೆ ನೀಡಿ, ಅ. 4ರಂದು ಮುಂಬೈಯ ಪ್ರಸಿದ್ದ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದ್ದಾರೆ.

Exit mobile version