ಉಜಿರೆ : ಸುದೀರ್ಘ 36 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಉಜಿರೆ ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯ ಮುಖ್ಯ ಶಿಕ್ಷಕ ಸುರೇಶ್ ಕೆ. ಸೆ.30ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.
1989 ಜುಲೈ 17ರಂದು ವಿಜ್ಞಾನ ಗಣಿತ ಶಿಕ್ಷಕರಾಗಿ ಶ್ರೀ ಗೌರಿ ಮೆಮೋರಿಯಲ್ ಹೈಸ್ಕೂಲ್ ನಲ್ಲಿ ವೃತ್ತಿ ಜೀವನ ಪ್ರಾರಂಭಿಸಿ ಅಲ್ಲಿ 11 ವರ್ಷ ಸೇವೆಗೈದು, ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆ ಉಜಿರೆಯಲ್ಲಿ 24 ವರ್ಷ ಸುದೀರ್ಘ ಸೇವೆ ಮಾಡಿ, ಕಳೆದ ಎರಡು ವರ್ಷಗಳ ಹಿಂದೆ ಮುಖ್ಯೋಪಾಧ್ಯಾಯರಾಗಿ ಭಡ್ತಿ ಹೊಂದಿ ಇದೀಗ ವಯೋ ನಿವೃತ್ತಿಗೊಂಡಿರುತ್ತಾರೆ.
ಇವರು ಮೂಲತ: ಶಂಕದಮೂಲೆ ಬೆಳ್ಳೂರು ಕಾಸರಗೋಡಿನ ವಾಸುದೇವ ಕಡಂಬಳ್ಳಿತ್ತಾಯ ಮತ್ತು ಶಾಕುಂತಲ ದಂಪತಿಯ ಪುತ್ರರಾಗಿದ್ದು ಪತ್ನಿ ಮಂಜುಳಾ, ಪುತ್ರ ಇಂಜಿನಿಯರ್ ವೈಷ್ಣವ್‌ರವರೊಂದಿಗೆ ಜೀವನವನ್ನು ನಡೆಸುತ್ತಿದ್ದಾರೆ.