ಧರ್ಮಸ್ಥಳ: ಗ್ರಾಮದ ಬಂಗ್ಲೆಗುಡ್ಡೆಯ ಬುರುಡೆ ಪ್ರಕರಣದ ಸಂಬಂಧ ಸೆ.30ರಂದು ಎಸ್.ಐ.ಟಿ. ಅಧಿಕಾರಿಗಳು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಜೊತೆ ಬಂಗ್ಲೆಗುಡ್ಡೆಗೆ ತೆರಳಿದ್ದಾರೆ. ವಿಠಲ ಗೌಡ ತೋರಿಸಿರುವ ಸ್ಥಳದ ಸ್ಕೆಚ್ ತಯಾರಿಗಾಗಿ ಲೋಕೋಪಯೋಗಿ ಇಲಾಖೆಯವರು ಭೇಟಿ ನೀಡಿರುವುದಾಗಿ ತಿಳಿದು ಬಂದಿದೆ.
ರಸ್ತೆಯಿಂದ ವಿಠಲ ಗೌಡ ತೋರಿಸಿದ ಜಾಗದ ದೂರವನ್ನು ಅಳೆದು ನಂತರ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಕೆಚ್ ತಯಾರಿಸಲಿದ್ದಾರೆ.