ಓಡಿಲ್ನಾಳ: ಶ್ರೀರಾಮನಗರ ಮೈರಲ್ಕೆ ಶ್ರೀ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯಿಂದ 3ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಕಾರ್ಯಕ್ರಮ ಸೆ. 28 ಮತ್ತು 29ರoದು ಜರಗಿತು.
ಸೆ. 28ರoದು ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾದ ಪ್ರಸನ್ನ ಭಟ್ ಅವರ ನೇತೃತ್ವದಲ್ಲಿ ವಿಶೇಷ ವೈದಿಕ ಕಾರ್ಯಕ್ರಮ ಗಣಪತಿ ಹೋಮ ಶ್ರೀ ಕಿರಾತ ಮೂರ್ತಿ ಮಹಾಲಿಂಗೇಶ್ವರ ದೇವರಿಗೆ ರುದ್ರಾಭಿಷೇಕ, ದುರ್ಗಾ ದೀಪ ನಮಸ್ಕಾರ ಪೂಜೆ ಭಜನಾ ಕಾರ್ಯಕ್ರಮ ಜರಗಿತು.
ಸೆ. 29ರoದು ಶಾರದಾ ದೇವಿಯ ವಿಗ್ರಹ ಪ್ರತಿಷ್ಠಾಪನೆ, ಬೆಳಗ್ಗಿನ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಧಾರ್ಮಿಕ ಸಭೆ ಜರಗಿತು. ಧಾರ್ಮಿಕ ಸಭೆಯ ಸಭಾಧ್ಯಕ್ಷತೆಯನ್ನು ಶಾರರ್ದೋತ್ಸವ ಸಮಿತಿಯ ಅಧ್ಯಕ್ಷ ನಿತೇಶ್ ಕೆ. ಓಡಿಲ್ನಾಳ ವಹಿಸಿದ್ದರು. ಧಾರ್ಮಿಕ ಉಪನ್ಯಾಸಕರಾಗಿ ಆಗಮಿಸಿದ ಸಾಮಾಜಿಕ ಚಿಂತಕ ರಮಿತ ಶೈಲೇಂದ್ರ ಕಾರ್ಕಳ ಮಾತನಾಡಿ ಶಾರದಾ ದೇವಿಯ ಆರಾಧನೆ ದೇವಸ್ಥಾನಗಳಲ್ಲಿ ಅಲ್ಲದೆ ನವರಾತ್ರಿಯ ದಿನಗಳ ಮಹತ್ವದ ಬಗ್ಗೆ ಮನೆ ಮನೆಗಳಲ್ಲಿ ಯುವ ಪೀಳಿಗೆಗಳಿಗೆ ಧಾರ್ಮಿಕತೆಯನ್ನು ಮೂಡಿಸುವಲ್ಲಿ ನಮ್ಮೆಲ್ಲರ ಕರ್ತವ್ಯವಾಗಿದೆ ಎoದರು. ಸಾರ್ವಜನಿಕ ಅನ್ನ ಸಂತರ್ಪಣೆ ಜರಗಿತು.
ಮುಖ್ಯ ಅತಿಥಿಯಾಗಿ ಬರೋಡದ ಉದ್ಯಮಿಗಳಾದ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ, ಮುoಬೈ ಉದ್ಯಮಿಗಳಾದ ಸುರೇಶ್ ಶೆಟ್ಟಿ ಶಬರಿ ಮುಂಗೇಲು, ನಿವೃತ್ತ ಅಧ್ಯಾಪಕ ಬೇಬಿ, ಸುರೇಶ್, ಬಾಬು, ಗುರು ರಾಘವೇಂದ್ರ, ಕೃಪ ಪಣೆಜಾಲು ಆಗಮಿಸಿದ್ದರು. ವೇದಿಕೆಯಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗೋಪಾಲ ಶೆಟ್ಟಿ ಕೋರಿಯಾರು, ಶಾರದೋತ್ಸವ ಸಮಿತಿ ಗೌರಾಧ್ಯಕ್ಷ ರಾಮಣ್ಣ ಕೋಲಾಜೆ, ಪ್ರಧಾನ ಕಾರ್ಯದರ್ಶಿ ಸುದೀಪ್ ಶೆಟ್ಟಿ ಮೂಡೈಲು, ಮಹಿಳಾ ಸಮಿತಿಯ ಅಧ್ಯಕ್ಷೆ ಭಾರತಿ ಅಡ್ಡ ಕೊಡಂಗೆ, ಭಜನಾ ಸಮಿತಿಯ ಅಧ್ಯಕ್ಷ ಚಿನ್ನಯ್ಯ ಮೂಲ್ಯ ಪರಾರಿ ಉಪಸ್ಥಿತರಿದ್ದರು. ಸಾಯಂಕಾಲ ಶಾರದಾ ದೇವಿಯ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಸುದೀಪ್ ಶೆಟ್ಟಿ ಸ್ವಾಗತಿಸಿದರು. ನಿತಿನ್ ಬರಾಯ ಕಾರ್ಯಕ್ರಮ ನಿರೂಪಿಸಿದರು. ಭಾರತಿ ಎಸ್. ಶೆಟ್ಟಿ ಧನ್ಯವಾದವಿತ್ತರು.