ವೇಣೂರು: ಹೊಸಂಗಡಿ ಗ್ರಾಮದ ಪೆರಿಂಜೆ ಎಂಬಲ್ಲಿ ಎರಡು ಮನೆಗೆ ಕಳ್ಳರು ನುಗ್ಗಿ ವಸ್ತುಗಳನ್ನು ಜಾಲಾಡಿ ಏನೂ ಸಿಗದೆ ಬರಿಗೈಯಲ್ಲಿ ಹೋಗಿದ್ದಾರೆ. ಶಾಲೆಗಳಿಗೆ ದಸರಾ ರಜೆ ಸಿಕ್ಕಿದ ಕಾರಣ ಮನೆಗೆ ಬೀಗ ಹಾಕಿ ತಾಯಿ ಮನೆಗಳಿಗೆ ಹೋಗಿದ್ದ ಪಿ.ಸಿ. ಅಬ್ದುಲ್ ಖಾದರ್ ಪತ್ನಿ ಬುಸ್ರಾ ಮನೆ ಹಾಗು ಉಮರ್ ಕೆ. ಪತ್ನಿ ಫೌಜಿಯಾ ಮನೆಗಳನ್ನು ಜಲಾಡಿ ಹೋಗಿದ್ದಾರೆ. ಸ್ಥಳಕ್ಕೆ ವೇಣೂರು ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ತನಿಖೆ ಮಾಡುತ್ತಿದ್ದಾರೆ.
ಹೊಸಂಗಡಿ: ಪೆರಿಂಜೆಯಲ್ಲಿ ಎರಡು ಮನೆಗೆ ನುಗ್ಗಿದ ಕಳ್ಳರು
