ಬೆಳ್ತಂಗಡಿ: ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ ) ನ 2025-26ನೇ ಸಾಲಿನ ನೂತನ ಪದಾಧಿಕಾರಿಗಳು ಆಯ್ಕೆಗೊಂಡಿದ್ದು ಪದಗ್ರಹಣ ಸಮಾರಂಭ ಅ. 7ರಂದು ಸಂಜೆ 6ಗಂಟೆಗೆ ಉಜಿರೆಯ ಓಷಿಯನ್ ಪರ್ಲ್ ಹೋಟೆಲ್ ನಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೂತನ ಸಾಲಿನ ಅಧ್ಯಕ್ಷರಾಗಿ ಎಂಜಿನಿಯರ್ ಎಂ.ಡಿ. ಸುರೇಶ್ ಬಂಗೇರ, ಕಾರ್ಯದರ್ಶಿಯಾಗಿ ಎಂಜಿನಿಯರ್ ಶಿಜೋ ಜೋಸೆಫ್, ಕೋಶಾಧಿಕಾರಿಯಾಗಿ ನಾಗೇಶ್ ಎಂ., ಆಯ್ಕೆಯಾಗಿದ್ದು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇಂಜಿನಿಯರ್ ಯಶೋಧರ ಪೂಜಾರಿ, ಇಂಜಿನಿಯರ್ ಹರ್ಷೇಂದ್ರ ಕುಮಾರ್, ಇಂಜಿನಿಯರ್ ಶ್ರವಣ್ ಕೆ., ಇಂಜಿನಿಯರ್ ಹಂಸರಾಜ್ ಆಯ್ಕೆಯಾಗಿದ್ದಾರೆ.