Site icon Suddi Belthangady

ಬಾರ್ಯ: ಶ್ರೀ ಭದ್ರಕಾಳಿ ದೇವಿಯ ಸನ್ನಿಧಿಗೆ ಹೊರ ಕಾಣಿಕೆ ಸಮರ್ಪಣೆ

ಬಾರ್ಯ: ಶ್ರೀ ಮಹಾವಿಷ್ಣು ದೇವಸ್ಥಾನದ ಶ್ರೀ ಭದ್ರಕಾಳಿ ದೇವಿಯ ಸನ್ನಿಧಿಯಲ್ಲಿ ನಡೆಯುತ್ತಿರುವ ಶರನ್ನವರಾತ್ರಿಯ ಉತ್ಸವದ ಅನ್ನ ಸಂತರ್ಪಣೆಗೆ ಪುತ್ತೂರು ನಗರಸಭೆಯ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ ಶೆಟ್ಟಿ ಮತ್ತು ಮಿತ್ರ ಬಳಗದವರು ಹೊರ ಕಾಣಿಕೆಯನ್ನು ದೇವಳದ ಸನ್ನಿಧಿಗೆ ಅರ್ಪಿಸಿದರು.

ದೇವಳದ ಟ್ರಸ್ಟಿನ ಪದಾಧಿಕಾರಿಗಳು ಉಪಸ್ಥಿತರಿದ್ದು ನೆಲ್ಲಿಕಟ್ಟೆ ಜಗದೀಶ ಶೆಟ್ಟಿ ಮತ್ತು ಬಳಗದವರನ್ನು ಪ್ರಸಾದ ನೀಡಿ ಗೌರವಿಸಿದರು. ನವರಾತ್ರಿಯ ಪ್ರಯುಕ್ತ ನಡೆಯುತ್ತಿರುವ ವಿವಿಧ ಭಜನಾ ಮಂಡಳಿಗಳ ಭಜನಾ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಎಲ್ಲರಿಗೂ ಶ್ರೀ ಭದ್ರಾಕಾಳಿಯ ಅನುಗ್ರಹ ಪ್ರಾಪ್ತಿಯಾಗಲಿ ಎಂದು ಹಾರೈಸಿದರು.

Exit mobile version