ವೇಣೂರು: ದೇವಾಡಿಗರ ಸೇವಾ ವೇದಿಕೆಯಿಂದ ಪ್ರತಿ ವರ್ಷದಂತೆ ಶರನ್ನವರಾತ್ರಿ ಪ್ರಯುಕ್ತ ಶ್ರೀ ಶಾರದಾ ದೇವಿಯ ಪೂಜೆಯು ವೇಣೂರು ದೇವಾಡಿಗರ ಸಮುದಾಯ ಭವನದಲ್ಲಿ ಸೆ. 26ರಂದು ನಡೆಯಿತು. ಪೂಜಾ ಕಾರ್ಯಕ್ರಮದಲ್ಲಿ ವೇದಿಕೆಯ ಕಾರ್ಯದರ್ಶಿ ಗಣೇಶ್ ದೇವಾಡಿಗ ಹಂದೇವು, ಉಪಾಧ್ಯಕ್ಷ ದಯಾನಂದ ದೇವಾಡಿಗ ಅಲಂತ್ಯಾರು, ಮಹಿಳಾ ವೇದಿಕೆಯ ಅಧ್ಯಕ್ಷೆ ಸುಮತಿ ಪಿ.ಎನ್. ಹಾಗೂ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು. ಭಜನಾ ಕಾರ್ಯಕ್ರಮ ನಡೆದು ಕೊನೆಗೆ ಪ್ರಸಾದ ವಿತರಣೆ ನಡೆಯಿತು.
ವೇಣೂರು: ದೇವಾಡಿಗರ ಸೇವಾ ವೇದಿಕೆಯಿಂದ ಶ್ರೀ ಶಾರದಾ ದೇವಿ ಪೂಜೆ
