Site icon Suddi Belthangady

ಅಕ್ರಮ ಬಂದೂಕು ದಾಸ್ತಾನು ಪ್ರಕರಣ-ವಿಚಾರಣೆಗೆ ಆಗಮಿಸದ ಆರೋಪಿ ಮಹೇಶ್ ಶೆಟ್ಟಿ ತಿಮರೋಡಿ-ಎರಡು ತಂಡ ರಚಿಸಿ ಪೊಲೀಸರ ಹುಡುಕಾಟ

ಉಜಿರೆ: ಅಕ್ರಮವಾಗಿ ಮನೆಯಲ್ಲಿ ಎರಡು ತಲವಾರು ಮತ್ತು ಒಂದು ಬಂದೂಕು ದಾಸ್ತಾನು ಮಾಡಿಟ್ಟ ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸರು ಆರೋಪಿ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಸೆ.26ರರಂದು ತೆರಳಿ ವಿಚಾರಣೆಗೆ ಹಾಜರಾಗುವಂತೆ ಅಂತಿಮ ನೋಟೀಸ್ ಅಂಟಿಸಿ ಬಂದಿದ್ದು, ಸೆ.29ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ. ಈವರೆಗೂ ವಿಚಾರಣೆಗೆ ಹಾಜರಾಗುವ ಮಾಹಿತಿ ಇಲ್ಲ, ಮತ್ತೊಂದೆಡೆ ಪೊಲೀಸರ ಎರಡು ತಂಡಗಳು ತಲೆಮರೆಸಿಕೊಂಡಿರುವ ಮಹೇಶ್ ಶೆಟ್ಟಿಯ ಹುಡುಕಾಟದಲ್ಲಿ ನಿರತವಾಗಿವೆ ಎಂದು ತಿಳಿದುಬಂದಿದೆ.

ಮತ್ತೊಂದೆಡೆ, ಮಹೇಶ್ ಶೆಟ್ಟಿ ತಿಮರೋಡಿ ಈ ಕೇಸ್ ನಲ್ಲಿ ದ.ಕ ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ಸೆ.30ರಂದು ವಿಚಾರಣೆ ನಡೆಯಲಿದೆ.

Exit mobile version