ಗೇರುಕಟ್ಟೆ: ಕಳಿಯ ಗ್ರಾಮದ ಎರುಕಡಪ್ಪು ಅಂಗನವಾಡಿಯಲ್ಲಿ ಪೋಷನ್ ಮಾಸಾಚರಣೆ ಅಂಗವಾಗಿ ಪೌಷ್ಟಿಕಾಹಾರ ಸಪ್ತಾಹ ಕಾರ್ಯಕ್ರಮ ಸೆ.27ರಂದು ನಡೆಯಿತು.
ಗೇರುಕಟ್ಟೆ ಆರೋಗ್ಯ ಕೇಂದ್ರದ ಸಿ.ಹೆಚ್.ಓ.ಆರೋಗ್ಯಧಿಕಾರಿ ನಾಗರಾಜ್ ಉತ್ತಮ ಆರೋಗ್ಯ ನಾವು ಸೇವಿಸುವ ಗುಣಮಟ್ಟದ ಆಹಾರ ಸೇವಿಸುವುದರಿಂದ ಶಾರೀರಿಕವಾಗಿ, ದೈಹಿಕ ಸಾಮರ್ಥ್ಯ ಹೊಂದಲು ಸಾಧ್ಯ. ಅಲ್ಲದೆ ಅಪೌಷ್ಟಿಕತೆಯಿಂದ ಮುಕ್ತಿ ಪಡೆಯಲು ಪೌಷ್ಠಿಕಾಹಾರಗಳ ಸೇವನೆಯಲ್ಲಿ ಮಕ್ಕಳ ಮನವೊಲಿಸುವಲ್ಲಿ ಪೋಷಕರ ಕೆಲಸವಾಗಬೇಕು ಎಂದು ಹೇಳಿದರು.
ಸೊಪ್ಪು, ತರಕಾರಿಗಳನ್ನು ಸೇವಿಸುವ ಮೂಲಕ ಆರೋಗ್ಯದ ಜೀವನ ನಡೆಸಲು ಸಾಧ್ಯ. ಮಾತ್ರವಲ್ಲದೇ ಮಾರುಕಟ್ಟೆಯಲ್ಲಿ ಸಿಗುವ ಪಾಸ್ಟ್ ಪುಡ್, ತಿಂಡಿ, ತಿನಿಸುಗಳನ್ನು ಮಕ್ಕಳಿಗೆ ಕೊಡುವುದರಿಂದ ಮಕ್ಕಳ ಆರೋಗ್ಯ ಮತ್ತು ಭವಿಷ್ಯದಲ್ಲಿ ತೊಂದರೆಗಳು ಉಂಟಾಗುತ್ತದೆ. ಹಾಗೂ ಅಂಗನವಾಡಿ ಕೇಂದ್ರಗಳ ಮೂಲಕ ಸಿಗುವ ಆಹಾರ, ಪದಾರ್ಥ ಮತ್ತು ಸಲಹೆಗಳಿಂದ ನಮ್ಮ ಜೀವನದಲ್ಲಿ ಉತ್ತಮ ಆರೋಗ್ಯ ಸಿಗುತ್ತದೆ ಎಂದು ಅಂಚೆ ಇಲಾಖೆ ನಿವೃತ್ತ ಡಾಕಯ್ಯ ಗೌಡ ಹೀರ್ಯ ಹೇಳಿದರು.
ಬಾಲ ವಿಕಾಸ ಸಮಿತಿ ಅಧ್ಯಕ್ಷೆ ನೀತಾ ಸತೀಶ್ ಸಭೆಯ ಅಧ್ಯಕ್ಷತೆ ವಹಿಸಿದರು.ಗರ್ಭಿಣಿ ಅರ್ಪಿತಾ ಅವರಿಗೆ ಸಿಮಂತ ಮಾಡಿದರು. ರಿಝ್ಮಾ ಫಾತಿಮ ಮಗುವಿಗೆ ಅನ್ನ ಪ್ರಶಾನ್ನ ನೀಡಿದರು. ಮಕ್ಕಳ ಪೋಷಕರು ಮನೆಯಲ್ಲಿ ತಯಾರಿಸಿ ತಂದಿರುವ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಪ್ರದರ್ಶಿಸಿ, ಸಾಮೂಹಿಕವಾಗಿ ಎಲ್ಲಾರು ಭೋಜನ ಸೇವಿಸಿದರು. ಅಂಗನವಾಡಿ ಸಹಾಯಕಿ ಗೀತಾ ಸಹಕರಿಸಿದರು.
ಲತಾಲಾಕ್ಷಿ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ಗುಣವತಿ ಕೆ.ಎನ್. ನಿರೂಪಿಸಿ, ವಂದಿಸಿದರು.