ಬೆಳ್ತಂಗಡಿ: ಹಳೆಕೋಟೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವತಿಯಿಂದ ಅಕ್ಟೋಬರ್ 12ರಂದು ವಾಣಿ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಹಾಗೂ ಕ್ರೀಡೆ, ಸಾಂಸ್ಕ್ರತಿಕ ಕ್ಷೇತ್ರದಲ್ಲಿ ಜಿಲ್ಲಾಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ಸಾಧನೆಗೈದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮವು ಸೆ. 27ರಂದು ವಾಣಿ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಜರಗಿತು.
ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಗೌರವಾಧ್ಯಕ್ಷ ಹೆಚ್. ಪದ್ಮ ಗೌಡ ಬೆಳಾಲು, ಕಾರ್ಯದರ್ಶಿ ಗಣೇಶ್ ಗೌಡ ಕಡಿರುದ್ಯಾವರ, ಕೋಶಾಧಿಕಾರಿ ಯುವರಾಜ ಅನಾರು, ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ, ಜತೆ ಕಾರ್ಯದರ್ಶಿ ಶ್ರೀನಾಥ್ ಕೆ.ಎಂ., ನಿಕಟ ಪೂರ್ವ ಉಪಾಧ್ಯಕ್ಷ ಧರ್ಣಪ್ಪ ಗೌಡ ಬಾನಡ್ಕ, ನಿಕಟ ಪೂರ್ವ ಕೋಶಾಧಿಕಾರಿ ಬಾಲಕೃಷ್ಣ ಬಿರ್ಮೊಟ್ಟು, ಕಾರ್ಯಕ್ರಮದ ಸಹಸಂಚಾಲಕರಾದ ಉಷಾದೇವಿ ಕಿನ್ಯಾಜೆ, ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ಪ್ರಜ್ವಲ್, ಬೆಳ್ತಂಗಡಿ, ಮಹಿಳಾ ವೇದಿಕೆ ಅಧ್ಯಕ್ಷರಾದ ಗೀತಾರಾಮಣ್ಣ ಗೌಡ ಕೊಯ್ಯೂರು, ಶೋಭಾ ನಾರಾಯಣ ಗೌಡ, ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ, ಕಾರ್ಯದರ್ಶಿ ಸುರೇಶ್ ಕೌಡಂಗೆ, ಕೋಶಾಧಿಕಾರಿ ರಂಜಿತ್ ಕಳೆಂಜ, ಉಪಾಧ್ಯಕ್ಷ ನಿತಿನ್ ಕಲ್ಮಂಜ, ಜತೆ ಕಾರ್ಯದರ್ಶಿ ತೀಕ್ಷಿತ್ ದಿಡುಪೆ, ಸಂಘಟನಾ ಕಾರ್ಯದರ್ಶಿ ಪ್ರಮೋದ್ ದಿಡುಪೆ, ಕಾನೂನು ಸಲಹೆಗಾರ ನವೀನ್ ಬಿ.ಕೆ., ನಿಕಟ ಪೂರ್ವ ಉಪಾಧ್ಯಕ್ಷ ಯಶವಂತ ಡೆಚ್ಚಾರು, ಪುದುವೆಟ್ಟು, ಸ್ಪಂದನಾ ಸೇವಾ ಸಂಘದ ಸಂಚಾಲಕರು ಮೋಹನ ಗೌಡ ಕೊಯ್ಯೂರು, ತಾಲೂಕು ಆಡಳಿತ ಮಂಡಳಿ ಸದಸ್ಯರು, ಯುವ ವೇದಿಕೆ ಸದಸ್ಯರು, ಗ್ರಾಮ ಸಮಿತಿಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿದ್ದರು.