Site icon Suddi Belthangady

ಪರಪ್ಪು: ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯಿಂದ ಭಜನಾ ಸೇವೆ

ಶಿಬರಾಜೆ: ಅರಿಕೆಗುಡ್ಡೆ ಬಳಿಯ ವನದುರ್ಗ ದೇವಾಲಯದಲ್ಲಿ ಸೆ.26ರಂದು ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂಡಳಿ ಪರಪ್ಪು ಶಿಬರಾಜೆ ನೇತೃತ್ವದಲ್ಲಿ ಭಜನೆ ಕಾರ್ಯಕ್ರಮ ಜರುಗಿತು. ಶಿಬರಾಜೆ ಪರಪ್ಪು ಮಂಡಳಿಯ ಅಧ್ಯಕ್ಷ ದಿನೇಶ್ ಗೌಡ ಸಿಂಬಲು ಅವರ ನೇತೃತ್ವದಲ್ಲಿ ಈ ಭಜನೆ ಸೇವೆ ವಿಜೃಂಭಣೆಯಿಂದ ನಡೆಯಿತು.

ಪರಪ್ಪು ಭಜನಾ ಮಂಡಳಿಯ ಎಲ್ಲಾ ಸದಸ್ಯರು ಭಕ್ತಿ ಭಾವಪೂರ್ಣವಾಗಿ ಭಾಗವಹಿಸಿ ವಿವಿಧ ಭಜನೆಗಳನ್ನು ಹಾಡಿ ಶ್ರದ್ಧಾ ನಮನ ಸಲ್ಲಿಸಿದರು. ಈ ಭಜನಾ ಸೇವೆಯಲ್ಲಿ ಸ್ಥಳೀಯ ವಿದ್ಯಾರ್ಥಿಗಳು, ಮಹಿಳೆಯರು, ಪುರುಷರು ಸೇರಿದಂತೆ ಭಕ್ತಾದಿಗಳು ಸಕ್ರಿಯವಾಗಿ ಭಾಗವಹಿಸಿದರು.

ಭಕ್ತಿಮಯ ವಾತಾವರಣದಲ್ಲಿ ನಡೆದ ಈ ಭಜನೆ ಕಾರ್ಯಕ್ರಮದಲ್ಲಿ ಭಕ್ತರ ಹೆಚ್ಚಿನ ಉಪಸ್ಥಿತಿ ಕಾಣಿಸಿಕೊಂಡಿತು. ಕಾರ್ಯಕ್ರಮದ ಕೊನೆಗೆ ಪ್ರಸಾದ ವಿತರಣೆಯು ನಡೆಯಿತು.

Exit mobile version