ಹೊಸಂಗಡಿ: ಗ್ರಾಮ ಪಂಚಾಯತ್ ನಲ್ಲಿ ನಡೆದ 2025-26ನೇ ಸಾಲಿನ ಮಹಿಳಾ ಗ್ರಾಮಸಭೆ ಹಾಗೂ ಆಸರೆ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆಯು ಹೊಸಂಗಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಸೆ. 25ರಂದು 10ಕ್ಕೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಗ್ರಾಮ ಪಂಚಾಯತ್ ಸದಸ್ಯರು, ತಾಲೂಕು ಸಂಯೋಜಕರು, ತಾಲೂಕು ಬಿ.ಆರ್.ಪಿ.ಪಿ.ಆರ್.ಐ, ಗ್ರಾಮ ಪಂಚಾಯತ್ ನ ನಿಕಟ ಪೂರ್ವ ಪಿಡಿಒ, ಪ್ರಭಾರ ಪಿಡಿಒ ಹಾಗೂ ಪ್ರಾಥಮಿಕ ಕೇಂದ್ರ ಆರೋಗ್ಯ ಅಧಿಕಾರಿಗಳು, ಆಸರೆ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಸ್ವ ಸಹಾಯ ಸಂಘದ ಸದಸ್ಯರು, ಆಶಾ ಕಾರ್ಯಕರ್ತೆಯರು, ಅರಿವು ಕೇಂದ್ರದ ಮೇಲ್ವಿಚಾರಕರು, ಎಲ್ಲಾ ಮಹಿಳೆಯರು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ನ ಜನಸ್ನೇಹಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕಳೆದ 11 ವರ್ಷಗಳಿಂದ ಸೇವೆ ಸಲ್ಲಿಸಿ ಇದೀಗ ಆರಂಬೋಡಿ ಗ್ರಾಮ ಪಂಚಾಯತ್ ಗೆ ವರ್ಗಾವಣೆಗೊಂಡಿರುವ ಗಣೇಶ್ ಶೆಟ್ಟಿ ಅವರನ್ನು ಹಾಗೂ ಆಸರೆ ಸಂಜೀವಿನಿ ಒಕ್ಕೂಟದ ಸದಸ್ಯೆ ರೋಹಿಣಿ ಅವರ ರೋಶಿಣಿ ನ್ಯೊಟ್ರಿಮಿಕ್ಸ್ ನನ್ನು ದೆಹಲಿ ಹಾಗೂ ರಾಜ್ಯದ ವಿವಿಧ ಪ್ರದರ್ಶನ ಮಳಿಗೆಗಳಲ್ಲಿ ಪ್ರದರ್ಶನ ಮಾಡಿ ರಾಜ್ಯ ಮಟ್ಟದಲ್ಲಿಯೇ ಉತ್ತಮ ಗುಣಮಟ್ಟದ ನ್ಯೊಟ್ರಿಮಿಕ್ಸ್ ಎಂದು ಗುರುತಿಸಲ್ಪಟ್ಟಿದೆ. ಅವರನ್ನು ಆಸರೆ ಸಂಜೀವಿನಿ ಒಕ್ಕೂಟದಿಂದ ಗೌರವಿಸಲಾಯಿತು.