Site icon Suddi Belthangady

ಕೊಕ್ಕಡ: ಕೌಕ್ರಾಡಿ ತ್ರಿಗುಣಾತ್ಮಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

ಕೊಕ್ಕಡ: ಕೌಕ್ರಾಡಿ ಗ್ರಾಮದ ತ್ರಿಗುಣಾತ್ಮಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಶ್ರದ್ಧಾಭಕ್ತಿಯಿಂದ, ಭಕ್ತರ ಉತ್ಸಾಹದಿಂದ ನಡೆಯುತ್ತಿದೆ. ದೇವಸ್ಥಾನ ಆಡಳಿತ ಟ್ರಸ್ಟ್ ಹಾಗೂ ನವರಾತ್ರಿ ನಿರ್ವಹಣಾ ಸಮಿತಿ ಕಾವು ಅವರ ನೇತೃತ್ವದಲ್ಲಿ ಸೆ.27ರಂದು ದೇವಸ್ಥಾನದ ಅರ್ಚಕ ಮಂಜುನಾಥ ಭಟ್ ಹಾಗೂ ತಂಡದವರ ಪೌರೋಹಿತ್ಯದಲ್ಲಿ ದುರ್ಗಾಪೂಜೆ ಮತ್ತು ರಂಗಪೂಜೆ, ಮಹಾಪೂಜೆ ಕಾರ್ಯಕ್ರಮಗಳು ಜರುಗಿದವು.

ಸೌತಡ್ಕ ಶ್ರೀ ಮಹಾಗಣಪತಿ ಗಾನವೃಂದ ಹಾಗೂ ಶ್ರೀ ವರಮಹಾಲಕ್ಷ್ಮಿ ಮಾತೃ ಭಜನಾ ಮಂಡಳಿ, ಸೂರ್ಯನಗರ-ನೆಲ್ಯಾಡಿ ಅವರಿಂದ ಭಕ್ತಿಗೀತೆಗಳ ಭಜನಾ ಸೇವೆ ನಡೆಯಿತು. ಸಾಂಪ್ರದಾಯಿಕ ರಾಗ-ರಸಗಳಲ್ಲಿ ತುಂಬಿದ ಭಜನೆಯು ಭಕ್ತರ ಮನಸ್ಸಿಗೆ ಭಕ್ತಿ ಮತ್ತು ಶಾಂತಿಯನ್ನು ತುಂಬಿತು.

ನೆಲ್ಯಾಡಿ ಲಹರಿ ಸಂಗೀತ ಕಲಾ ಕೇಂದ್ರ ಐಐಸಿಟಿಯ ಸಂಗೀತ ಗುರು, ಅಂತರಾಷ್ಟ್ರೀಯ ಆರ್ಯಭಟ್ಟ ಪ್ರಶಸ್ತಿ ಪುರಸ್ಕೃತ ವಿಶ್ವನಾಥ ಶೆಟ್ಟಿ ಕೆ. ನೆಲ್ಯಾಡಿ ಅವರಿಂದ “ನಗಬೇಕು ಆಗಾಗ ಬದುಕಿನೊಳಗೆ” ಎಂಬ ಶೀರ್ಷಿಕೆಯೊಂದಿಗೆ ಭಕ್ತಿಗೀತೆ, ಭಾವಗೀತೆ ಗಾನಗಳಿಂದ ಕೂಡಿದ ಸಂಗೀತ ಕಾರ್ಯಕ್ರಮ ನಡೆಯಿತು. ಮಹಾಪೂಜೆಯ ನಂತರ ತೀರ್ಥ ಪ್ರಸಾದ ವಿತರಿಸಿ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಟ್ರಸ್ಟ್ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಹಾಗೂ ಸದಸ್ಯರು, ಪವಿತ್ರಪಾಣಿ ಸೂರ್ಯನಾರಾಯಣ ಯಡಪಡಿತ್ತಾಯ, ನವರಾತ್ರಿ ನಿರ್ವಹಣಾ ಸಮಿತಿ ಅಧ್ಯಕ್ಷ ದೇವರಾಜ್ ಹೊಸಹೊಕ್ಲು ಹಾಗೂ ಸದಸ್ಯರು, ದುರ್ಗಾವಾಹಿನಿ ಮಹಿಳಾ ತಂಡದ ಅಧ್ಯಕ್ಷೆ ಶಶಿಕಲಾ ಹಾಗೂ ಸದಸ್ಯರು, ಕಾವು ಯುವಕೇಸರಿ ಅಧ್ಯಕ್ಷ ರಘು ಗೌಡ ಹಾಗೂ ಸದಸ್ಯರು, ಗ್ರಾಮದ ಭಕ್ತಾದಿಗಳು ಉಪಸ್ಥಿತರಿದ್ದರು.

Exit mobile version