Site icon Suddi Belthangady

ಬೆಳ್ತಂಗಡಿ: ಸಂತ ತೆರೇಸಾ ಸಯುಕ್ತ ಪ. ಪೂರ್ವ ಕಾಲೇಜಿನಲ್ಲಿ ಸೈಬರ್ ಸೇಫ್ಟಿ ಹಾಗೂ ತಂತ್ರಜ್ಞಾನದ ಬಳಕೆಯಲ್ಲಿ ಅನುಸರಿಸಬೇಕಾದ ಜಾಗರೂಕತೆಗಳ ಬಗ್ಗೆ ಕಾರ್ಯಗಾರ

ಬೆಳ್ತಂಗಡಿ: ಸಂತ ತೆರೇಸಾ ಸಯುಕ್ತ ಪ. ಪೂರ್ವ ಕಾಲೇಜಿನಲ್ಲಿ ಸೆ.24ರಂದು ಪಿಯುಸಿ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೈಬರ್ ಸೇಫ್ಟಿ ಹಾಗೂ ತಂತ್ರಜ್ಞಾನದ ಬಳಕೆಯಲ್ಲಿ ಅನುಸರಿಸಬೇಕಾದ ಜಾಗರೂಕತೆಗಳ ಬಗ್ಗೆ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು.

ಬೆಳ್ತಂಗಡಿಯ ಪ್ರಮುಖ ನ್ಯಾಯವಾದಿ ಬಿ.ಕೆ. ನವೀನ್ ಕುಮಾರ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದು, ಇಂಟರ್ನೆಟ್ ಮತ್ತು ಡಿಜಿಟಲ್ ಸಾಧನಗಳನ್ನು ಬಳಸುವಾಗ ನಮ್ಮ ವೈಯುಕ್ತಿಕ ಮಾಹಿತಿ, ಖಾತೆಗಳು ಸಾಧನೆಗಳ ಗೌಪ್ಯತೆಯನ್ನು ರಕ್ಷಿಸುವ ಕ್ರಮಗಳು ಹಾಗೂ ಮೊಬೈಲ್, ಕಂಪ್ಯೂಟರ್, ಇಂಟರ್ನೆಟ್ ತಂತ್ರಜ್ಞಾನಗಳನ್ನು ಜಾಗರೂಕತೆಯಿಂದ ಇತರರಿಗೆ ಹಾನಿ ಮಾಡದಂತೆ ಸಮಾಜಕ್ಕೆ ಒಳ್ಳೆಯದನ್ನುಂಟು ಮಾಡುವ ರೀತಿಯಲ್ಲಿ ಬಳಕೆ ಮಾಡಬೇಕು ಎಂಬುದನ್ನು ಸವಿಸ್ತಾರವಾಗಿ ತಿಳಿಸಿದರು.

ಕಾರ್ಯಗಾರದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಭಗಿನಿ ಮೋಲಿ ಡಿಕುಣ್ಣ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾಲೇಜು ವಿದ್ಯಾರ್ಥಿನಿ ಫಾತಿಮಾ ರಿಧಾ ಅವರು ನಿರೂಪಿಸಿ, ಮರಿಟ ಅವರು ವಂದಿಸಿದರು.

Exit mobile version