Site icon Suddi Belthangady

ಬುರುಡೆ ಪ್ರಕರಣ-ಆರೋಪಿ ಚಿನ್ನಯ್ಯ ಬೆಳ್ತಂಗಡಿ ಮುಚ್ಚಿದ ಕೋರ್ಟ್ ನಲ್ಲಿ ಹೇಳಿಕೆ ಮುಗಿಸಿ ವಾಪಾಸ್- ನಾಳೆಯಿಂದ ತನಿಖೆಗೆ ಮತ್ತಷ್ಟು ಚುರುಕು ಸಿಗುವ ಸಾಧ್ಯತೆ

ಬೆಳ್ತಂಗಡಿ: ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯ ಮುಚ್ಚಿದ ಕೋರ್ಟ್ ನಲ್ಲಿ 183 ಬಿ.ಎನ್.ಎಸ್.ಎಸ್ ರಡಿ ಮುಚ್ಚಿದ ಕೋರ್ಟ್ ನಲ್ಲಿ ತನ್ನ ಸ್ವ ಇಚ್ಛಾ ಹೇಳಿಕೆ ನೀಡಿ ಸೆ.27ರಂದು ವಾಪಾಸಾಗಿದ್ದಾರೆ. ಈ ಹಿಂದೆ ಆರೋಪಿಯನ್ನು ತೆರೆದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾಗ ತನಗೆ ನ್ಯಾಯಾಲಯದ ಮುಂದೆ ಹೇಳಲು ತುಂಬಾ ಸಂಗತಿಗಳು ಇವೆ ಎಂದು ನಿವೇದಿಸಿಕೊಂಡ ಹಿನ್ನಲೆಯಲ್ಲಿ ಈ ಹೇಳಿಕೆಯನ್ನು ಪಡೆಯಲಾಗಿದೆ.

ಸೆ.23, ಸೆ.25ರರಂದು ಭಾಗಶಃ ಹೇಳಿಕೆ ಪಡೆಯಲಾಗಿತ್ತು. ಇಂದು (ಸೆ.27)ಆರೋಪಿಯ ಪೂರ್ಣ ಪ್ರಮಾಣದ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಚಿನ್ನಯ್ಯನನ್ನು ಶಿವಮೊಗ್ಗ ಪೊಲೀಸರು ಬೆಳಗ್ಗೆ 11ಗಂಟೆಗೆ ಬೆಳ್ತಂಗಡಿ ಕೋರ್ಟ್ ಗೆ ಕರೆ ತಂದಿದ್ದರು. ಆತನ ಇಂದು ಮೂರನೇ ಬಾರಿಗೆ ಮುಚ್ಚಿದ ಕೋರ್ಟ್ ನಲ್ಲಿ ಹೇಳಿಕೆ ನೀಡಿ ವಾಪಾಸಾಗಿದ್ದಾರೆ.

ಬೆಳ್ತಂಗಡಿ ತಾಲೂಕು ನ್ಯಾಯಾಲಯದ ಹೆಚ್ಚುವರಿ ವ್ಯಾವಹಾರಿಕ ಮತ್ತು ಪ್ರಥಮ ದರ್ಜೆ ನ್ಯಾಯಾಧೀಶ ವಿಜಯೇಂದ್ರ ಅವರ ಮುಂದೆ ಹಾಜರಾಗಿ ಹೇಳಿಕೆ ನೀಡಿರುವ ಚಿನ್ನಯ್ಯನನ್ನು ಪೊಲೀಸರು ಶಿವಮೊಗ್ಗ ಜೈಲಿಗೆ ವಾಪಾಸ್ ಕರೆದುಕೊಂಡು ಹೋಗಿದ್ದಾರೆ. ಚಿನ್ನಯ್ಯ ಹೇಳಿಕೆ ನಂತರ ಪ್ರಕರಣದ ತನಿಖೆಗೆ ಮತ್ತಷ್ಟು ವೇಗ ಸಿಗಲಿದ್ದು, ಬೆಳ್ತಂಗಡಿಯಲ್ಲಿ ಎಸ್.ಐ.ಟಿ ಸಂಚಲನ ಉಂಟು ಮಾಡುವ ಸಾಧ್ಯತೆಯಿದೆ.

Exit mobile version