Site icon Suddi Belthangady

ನಡ: ಮಂಜೊಟ್ಟಿ ಬಿ.ಕೆ. ಹರಿಪ್ರಸಾದ್ ಅನುದಾನದಲ್ಲಿ ನಿರ್ಮಾಣವಾದ ಆಟೋ ನಿಲ್ದಾಣ ಉದ್ಘಾಟನೆ

ನಡ: ಗ್ರಾಮದ ಮೇಲಿನ ಮಂಜೊಟ್ಟಿಯಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರ 2024-25ನೇ ಸಾಲಿನ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯಡಿ ನಿರ್ಮಾಣವಾದ ಆಟೋ ನಿಲ್ದಾಣದ ನವನ್ನು ನಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಕೆ. ಮಂಜುಳಾ ಅವರು ಉದ್ಘಾಟನೆ ಮಾಡಿದರು.

ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅವರು ನಮ್ಮ ತುಳುನಾಡ್ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಾಮಿಯಾ ಮಸ್ಜಿದ್ ಜಮಲಾಬಾದ್ ನ ಅಧ್ಯಕ್ಷ ಸಯ್ಯದ್ ಹಬೀಬ್ ಅವರು ಆಟೋಗಳಿಗೆ ಸ್ಟಿಕ್ಕರ್ ಅಂಟಿಸುವ ಮೂಲಕ ಚಾಲನೆ ನೀಡಿದರು.

ನಡ ಗ್ರಾಮ ಪಂಚಾಯತ್ ಪಿಡಿಓ ಶ್ರೀನಿವಾಸ್ ಡಿ.ಪಿ., ನಡ ಗ್ರಾಮದ ಲೈನ್ ಮ್ಯಾನ್ ಅಶೋಕ್ ಹಾಗೂ PWD ಕಂಟ್ರಾಕ್ಟರ್ ಲತೀಫ್ ಚಾರ್ಮಾಡಿ ಅವರಿಗೆ ಎಂ.ಬಿ. ಆಟೋ ಚಾಲಕ ಮಾಲಕರ ಸಂಘದಿಂದ ಸನ್ಮಾನ ಮಾಡಲಾಯಿತು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಿ. ರಾಜಶೇಖರ್ ಅಜ್ರಿ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್, ನಡ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯ ಶೆಟ್ಟಿ, ನಡ ಗ್ರಾಮ ಪಂಚಾಯತ್ ಕಾರ್ಯದರ್ಶಿ ಕಿರಣ್ ಎಮ್., ದ.ಕ. ಜಿಲ್ಲಾ ಆಟೋ ಯೂನಿಯನ್ ಪ್ರಧಾನ ಕಾರ್ಯದರ್ಶಿ ಅನ್ಸಾರ್ ಬಜಾಲ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಹಳ್ಳಿಮನೆ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರವೀಣ್ ವಿ.ಜಿ., ಹರೀಶ್ ಎನ್.ಬಿ., ಲಲಿತ ಒಬಯ್ಯ ಗೌಡ, ಶಶಿಕಲಾ ಜೈನ್, ಮಾಜಿ ಅಧ್ಯಕ್ಷ ಬಿ.ಮುನಿರಾಜ ಅಜ್ರಿ, ಬಿ. ವಿಠಲ ಶೆಟ್ಟಿ, ನಡ ಕನ್ಯಾಡಿ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಜಾಕೀರ್ ಹುಸೇನ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಮೈರಾ ಭಾನು, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಅಝರ್ ನಾವೂರು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.
ಎಂ.ಬಿ. ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಬಿ.ಎ. ರಜಾಕ್ ಅವರು ಕಾರ್ಯಕ್ರಮ ನಿರೂಪಿಸಿದರು.

Exit mobile version