ಬೆಳ್ತಂಗಡಿ: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯವು ಅತ್ಯಂತ ಯಶಸ್ವಿಯಾಗಿ ಪೂರ್ತಿಗೊಂಡಿರುತ್ತದೆ ಹಾಗೂ ಬ್ರಹ್ಮಕಲಶೋತ್ಸವವೂ ಅತ್ಯಂತ ವೈಭವದಿಂದ ಶ್ರೀ ದೇವಿಯ ಕೃಪೆಯಿಂದ ನೆರವೇರಿರುತ್ತದೆ. ದೇವಳದ ಕಾಮಗಾರಿಗಳನ್ನು ಜೀರ್ಣೋದ್ದಾರ ಸಮಿತಿಯಿಂದ ಸೆ.26ರವರೆಗೂ ಧಾರ್ಮಿಕ ದತ್ತಿ ಇಲಾಖೆಯ ಸೂಚನೆಯಂತೆ ಮಾಡಲಾಗಿರುತ್ತದೆ.
ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಸೂಚನೆಯಂತೆ ಜೀರ್ಣೋದ್ಧಾರ ಸಮಿತಿಯ [27-6-2022 ರಿಂದ 26-6-2025ರ ಅವಧಿ] ಲೆಕ್ಕಾಚಾರಗಳನ್ನು ಸಾರ್ವಜನಿಕರಿಗೆ ನೀಡುವ ಉದ್ದೇಶದಿಂದ ಸೆ.28 ರಂದು ಬೆಳಿಗ್ಗೆ ಗಂಟೆ 10-30ಕ್ಕೆ ಕೊಲ್ಲಿ ಶ್ರೀ ದುರ್ಗಾ ಕಲಾಮಂದಿರದಲ್ಲಿ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.