Site icon Suddi Belthangady

ಮತ್ತೆ ಸ್ಥಗಿತಗೊಂಡ ಪದ್ಮುಂಜ ಬಿ ಎಸ್ ಎನ್ ಎಲ್ ಮೊಬೈಲ್ ಟವರ್

ಪದ್ಮುಂಜ: ಬಿ ಎಸ್ ಎನ್ ಎಲ್ ಟವರ್ ನಾಲ್ಕೈದು ದಿನಗಳಿಂದ ಕಾರ್ಯಚರಿಸದೆ ಸ್ಥಗಿತಗೊಂಡಿದೆ. ಕೆಲವು ತಿಂಗಳ ಹಿಂದೆ ಹಲವಾರು ತಿಂಗಳುಗಳ ಕಾಲ ಸ್ಥಗಿತಗೊಂಡಿದ್ದ ಪದ್ಮುಂಜ ಬಿ ಎಸ್ ಎನ್ ಎಲ್ ಮೊಬೈಲ್ ಟವರ್ ಸಾರ್ವಾಜನಿಕರ ಒತ್ತಡ ಹಾಗೂ ಸುದ್ದಿ ಬಿಡುಗಡೆ ಪತ್ರಿಕೆ ಯಲ್ಲಿ ಪ್ರಕಟವಾದ ವರದಿಯನ್ನು ಪರಿಗಣಿಸಿ ಎಚ್ಚೆತ್ತುಕ್ಕೊಂಡ ಬಿ ಎಸ್ ಎನ್ ಎಲ್ ಟೆಲಿಫೋನ್ ಇಲಾಖೆ ಕೂಡಲೇ ಸ್ಪಂದಿಸುವ ಮೂಲಕ 2 ಜಿ ಯಾಗಿದ್ದ ಟವರನ್ನು 4 ಜಿ ಯಾಗಿ ಪರಿವರ್ತಿಸಿ ಸ್ತಗಿತಗೊಂಡಿದ್ದ ಬಿ ಎಸ್ ಎನ್ ಎಲ್ ಮೊಬೈಲ್ ಟವರಿಗೆ ಜೀವ ಕಲೆ ತುಂಬಿತ್ತು

ನಾಗರಿಕರು ಬಹಳ ಸಂತೋಷದಿಂದ ನೂರಾರು ಮಂದಿ ತಮ್ಮಲ್ಲಿದ್ದ ಖಾಸಗಿ ಕಂಪಿನಿಯ ಸಿಂಗಳನ್ನು ಕ್ಯಾಂಸಲ್ ಮಾಡಿ ಬಿ ಎಸ್ ಎನ್ ಎಲ್ ಮೊಬೈಲ್ ಸಿಂ ಪಡೆದುಕೊಂಡಿದ್ದರು. ಆದರೇನಂತೆ ಬಿ ಎಸ್ ಎನ್ ಎಲ್ ಮೊಬೈಲ್ ಟವರ್ ಆಗಾಗ ಕೈ ಕೊಡುತ್ತಿದ್ದು ಬಳಕೆದಾರರು ಬಿ ಎಸ್ ಎನ್ ಎಲ್ ಮೊಬೈಲ್ ಸಿಂ ಪಡೆದುಕೊಂಡು ‌ಸೋತು ಹೋಗಿದ್ದಾರೆ. ಕೈಯಲ್ಲಿದ್ದ ಹಕ್ಕಿಯನ್ನು ಬಿಟ್ಟು ಹಾರುವ ಹಕ್ಕಿಗೆ ಕೈ ಚಾಚಿದ ಸ್ಥಿತಿಯಾಗಿದೆ.

4 ಜಿ ಯಾಗಿ ಪರಿವರ್ತನೆಗೊಂಡಂದಿನಿಂದಲೇ ಆಗಾಗ ಕೈ ಕೊಡುತ್ತಿದ್ದ ಟವರ್ ಪ್ರಾರಂಭದಲ್ಲಿ ಕರೆಂಟಿಲ್ಲದಾಗ ಮಾತ್ರ ಕೈ ಕೊಡುತ್ತಿತ್ತು. ಇದೀಗ ನಾಲ್ಕೈದು ದಿನಗಳಿಂದ ಕರೆಂಟಿದ್ದರೂ ಟವರ್ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಬಿ ಎಸ್ ಎನ್ ಎಲ್ ಮೊಬೈಲ್ ಟವರನ್ನು ನಂಬಿದ ಬಳಕೆದಾರರು ಕಂಗಾಲಾಗಿ ಸೋತು ಹೋಗಿದ್ದಾರೆ ಸಂಬಂಧಿಸಿದ ಇಲಾಖಾಧಿಕಾರಿಗಳು ಕರೆಂಟಿಲ್ಲದಾಗ ಟವರ್ ಚಲಾವಣೆಯಾಗಲು ಕೂಡಲೇ ಬ್ಯಾಟರಿ ಸಿಸ್ಟಂ ಅಳವಡಿಸಿ ಸ್ಥಗಿತಗೊಂಡ ಟವರನ್ನು ದುರಸ್ತಿಪಡಿಸುದರ ಮೂಲಕ ಬಿ ಎಸ್ ಎನ್ ಎಲ್ ಮೊಬೈಲ್ ಟವರನ್ನು ನಂಬಿದ ಬಳಕೆದಾರರಿಗೆ ನೆಮ್ಮದಿ ನೀಡಬೇಕಾಗಿದೆ.
ವರದಿ: ಕಾಸಿಂ ಪದ್ಮುಂಜ

Exit mobile version