Site icon Suddi Belthangady

ಸಾಮಾಜಿಕ & ಶೈಕ್ಷಣಿಕ ಸಮೀಕ್ಷೆಯ ತಾಂತ್ರಿಕ ಸಮಸ್ಯೆ ಬಗೆಹರಿಯುವವರೆಗೂ ಗಣತಿದಾರ ಶಿಕ್ಷಕರಿಗೆ ವಿನಾಯಿತಿ ಕೊಡಿಸುವಂತೆ ತಾ. ಪಂ. ಕಾರ್ಯನಿರ್ವಹಣಾಧಿಕಾರಿಗೆ ಮನವಿ

ಬೆಳ್ತಂಗಡಿ: ತಾಲೂಕಿನಲ್ಲಿ ಸಾಮಾಜಿಕ & ಶೈಕ್ಷಣಿಕ ಸಮೀಕ್ಷೆ ಪ್ರಾರಂಭವಾಗಿ ಐದನೇ ದಿನಕ್ಕೆ ಕಾಲಿಟ್ಟಿದ್ದರೂ ಸಮೀಕ್ಷಾ ಆಯಪ್ ಸರಿಯಾಗಿ ಕಾರ್ಯ ನಿರ್ವಹಿಸದೇ ಇರುವ ಬಗ್ಗೆ ಬೆಳ್ತಂಗಡಿ ಆಡಳಿತ ಸೌಧದಲ್ಲಿ ಬೆಳ್ತಂಗಡಿ ಶಿಕ್ಷಕರು ಒಟ್ಟು ಸೇರಿ ಪ್ರತಿಭಟನೆ ನಡೆಸಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಇವರಿಗೆ ಸೆ. 25ರಂದು ಮನವಿ ಸಲ್ಲಿಸಿದರು.

ಗಣತಿದಾರ ಶಿಕ್ಷಕರು ಹತ್ತಾರು ಕಿ.ಮೀ ದೂರ ಪ್ರಯಾಣ ಮಾಡಿ ಬೆಳಗ್ಗಿನಿಂದ ಸಂಜೆಯವರೆಗೆ ಶಿಕ್ಷಕರು ಊಟ, ತಿಂಡಿ ಸಿಗದ ಜಾಗದಲ್ಲಿ ಸಮೀಕ್ಷೆ ಒಂದೂ ಪೂರ್ಣಗೊಳಿಸು ಸಾಧ್ಯವಾಗದೇ ಹಿಂದಿರುಗುತ್ತಿದ್ದು,
ಸಾಮಾನ್ಯ ಜನರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಇಚ್ಚಿಸದೆ ಗಣತಿದಾರ ಶಿಕ್ಷಕರನ್ನು ಅನುಮಾನದಿಂದ ನೋಡುತ್ತಿರುವ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಹಾಗಾಗಿ ಜನಸಾಮಾನ್ಯರಿಗೆ ಜಾಗೃತಿ ಮೂಡಿಸಿ ನಂತರ ಸಮೀಕ್ಷೆ ಮಾಡಲು ಅನುವು ಮಾಡಿಕೊಡಬೇಕು ಮತ್ತು ನೆಟ್ವರ್ಕ್ ಸಮಸ್ಯೆ ಇರುವ ಕಡೆ ಆಪ್ ಓಪೆನ್ ಆಗುವುದೇ ಇಲ್ಲ ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು 150 ಕ್ಕೂ ಅಧಿಕ ಮನೆಗಳನ್ನು ಮ್ಯಾಪಿಂಗ ಮಾಡಿರುವುದು ದಕ್ಷಿಣ ಕನ್ನಡದಂತಹ ಭೌಗೋಳಿಕವಾಗಿ ಗುಡ್ಡಗಾಡಿನಿಂದ ಕೂಡಿರುವ ಸ್ಥಳಗಳಲ್ಲಿ ಅಷ್ಟು ಮನೆಗಳ ಸಮೀಕ್ಷೆ ನಡೆಸುವುದು ಕಷ್ಟಸಾಧ್ಯವಾಗಿದ್ದು ಜಿಲ್ಲೆಗೆ ಕೇವಲ 100 ಮನೆಗೆ ಸೀಮಿತಗೊಳಿಸಿ ಸಮೀಕ್ಷೆ ಮಾಡಲು ಅನುವು ಮಾಡಿಕೊಡಬೇಕು.

ಮಹಿಳಾ ಶಿಕ್ಷಕರು ಗುಡ್ಡಗಾಡು ಪ್ರದೇಶದಲ್ಲಿ ಒಬ್ಬರೇ ಸಮೀಕ್ಷೆ ಮಾಡುವುದು ಕಷ್ಟಸಾಧ್ಯವಾಗಿದ್ದು, ಅವರಿಗೆ ಸಹಾಯಕರನ್ನು ನೇಮಕ ಮಾಡಿ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುವ ಜೊತೆಗೆ ಆಪ್ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಆಗುವವರೆಗೆ ಸಮೀಕ್ಷಾ ಕಾರ್ಯದಿಂದ ಶಿಕ್ಷಕರಿಗೆ ವಿನಾಯಿತಿ ಕೊಡಿಸಬೇಕೆಂದು ಮನವಿ ಸಲ್ಲಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಕಿಶೋರ್ ಕುಮಾರ್, ಕಾರ್ಯದರ್ಶಿ ಸುರೇಶ್, ನೌಕರರ ಸಂಘದ ಅಧ್ಯಕ್ಷರು ಜಯರಾಜ್ ಜೈನ್, ಕಾರ್ಯದರ್ಶಿ ವಿಕಾಸ್ ಕುಮಾರ್, ಪದವೀದರ ಶಿಕ್ಷಕರ ಸಂಘದ ಅಧ್ಯಕ್ಷ ಯೋಗೇಶ್ ಎಚ್ ಆರ್, ಬಿಸಿಎಂ ಜೋಸೆಫ್, ಪ್ರಾಥಮಿಕ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಮಂಗಳ ಆರತಿ, ಕಿರಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Exit mobile version