Site icon Suddi Belthangady

ಧರ್ಮಸ್ಥಳದಲ್ಲಿ ಕೃತಜ್ಞತಾ ಸಭೆ – ಈಗ ನನ್ನ ಮನಸ್ಸು ಹಗುರವಾಗಿದೆ: ಡಾ.ಡಿ ವೀರೇಂದ್ರ ಹೆಗ್ಡೆ

ಧರ್ಮಸ್ಥಳ: ಸರ್ಕಾರ ಎಸ್ಐಟಿ ಮಾಡಿದ ಕಾರಣ ಸತ್ಯ ಹೊರ ಬರ್ತಾ ಇದೆ. ಅದಕ್ಕಾಗಿ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಡೆ ಹೇಳಿದರು.

ಧರ್ಮಸ್ಥಳದ ಅಮೃತವರ್ಷಿಣಿಯಲ್ಲಿ ನಡೆದ ಕೃತಜ್ಞತಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಮೇಲೆ ಶತ್ರುತ್ವ ಹಗೆತನ, ಅಪವಾದ ಯಾಕೆ ಬಂತು ಅಂತ ಗೊತ್ತಿಲ್ಲ. ಅಂತಹ ತಪ್ಪು ನಾವು ಏನು ಮಾಡಿಲ್ಲ ಎಂದರು. ನಾವು ನಿಸ್ವಾರ್ಥ ಸೇವೆ ಮಾಡಿದ್ದೇನೆ. ಇಷ್ಟು ವರ್ಷ ನಾವು ಆರೋಗ್ಯವಾಗಿರಲು ನಮ್ಮ ನಿಸ್ವಾರ್ಥ ಸೇವೆಯೇ ಕಾರಣ. ನಿಮಗೆ ನಾನು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ. ಈಗ ಮನಸ್ಸು ಸ್ವಲ್ಪ ಹಗುರವಾಗಿದೆ. ನಮ್ಮ ಮೇಲೆ ದೃಢವಾದ ನಂಬಿಕೆ ಇಟ್ಟ ಎಲ್ಲರಿಗೂ ನಾನು‌ ಆಭಾರಿ. ನಾವು ತಪ್ಪು ಮಾಡದ ಕಾರಣ ನಮಗೆ ಆತ್ಮವಿಶ್ವಾಸ ಇದೆ. ಎಸ್ಐಟಿ ವರದಿ ಅರ್ಧ ಬಂದ ಕಾರಣ ನಾನು ಇಷ್ಟು ಧೈರ್ಯವಾಗಿ ಮಾತನಾಡ್ತಾ ಇದ್ದೇನೆ. ಸರ್ಕಾರಕ್ಕೆ ನಾನು ಆಭಾರಿ. ಎಸ್ಐಟಿ ಮಾಡಿದ ಕಾರಣ ಸತ್ಯ ಹೊರ ಬರ್ತಾ ಇದೆ. ನಾವು ಸತ್ಯದಿಂದ ಇದ್ದೇವೆ. ಹಾಗೆಯೇ ಮುಂದೆಯೂ ಇರ್ತೇವೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.

ಸಭೆಯಲ್ಲಿ ಹೇಮಾವತಿ ಹೆಗ್ಡೆ, ಹರ್ಷೇಂದ್ರ ಕುಮಾರ್ ಹೆಗ್ದೆ, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ದ ಅಮಿತ್, ಅನಿತಾ ಸುರೇಂದ್ರ ಕುಮಾರ್, ನಂದೀಶ್ ಹಾಗೂ ಮೈತ್ರಿ ನಂದೀಶ್ ದಂಪತಿಗಳು ಉಪಸ್ಥಿತರಿದ್ದರು.

Exit mobile version