ಉಜಿರೆ: ಅಕ್ರಮವಾಗಿ ಮನೆಯಲ್ಲಿ ಎರಡು ತಲವಾರು ಮತ್ತು ಒಂದು ಬಂದೂಕು ದಾಸ್ತಾನು ಮಾಡಿಟ್ಟ ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸರು ತಿಮರೋಡಿ ಮನೆಗೆ ಇಂದು ತೆರಳಿ ವಿಚಾರಣೆಗೆ ಹಾಜರಾಗುವಂತೆ ಅಂತಿಮ ನೋಟೀಸ್ ಅಂಟಿಸಿ ಬಂದಿದ್ದಾರೆ.ಎಸ್.ಐ.ಟಿ ಶೋಧದ ವೇಳೆ ಪತ್ತೆಯಾದ ಅಕ್ರಮ ಮಾರಕಾಸ್ತ್ರಗಳ ಬಗ್ಗೆ ಸೆ.16ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಸ್.ಐ.ಟಿ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು.
ಈ ಬಗ್ಗೆ ಬೆಳ್ತಂಗಡಿ ಪೊಲೀಸರು ಸೆ.18ರಂದು ಉಜಿರೆ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಮಹಜರು ನಡೆಸಲು ತೆರಳಿದ್ದರು.
ಈ ವೇಳೆ ಮನೆಯಲ್ಲಿ ಇಲ್ಲದ ಕಾರಣ ಮತ್ತೆ ಮರುದಿನ
ಮನೆಗೆ ಸೆ.19 ರಂದು ಬೆಳಗ್ಗೆ 6 ಗಂಟೆಗೆ ಬೆಳ್ತಂಗಡಿ ಪೊಲೀಸರು ಹೋದಾಗ ಪ್ರಕರಣದ ಗಂಭೀರತೆ ಅರಿತು ತಿಮರೋಡಿ ತಲೆಮೆರೆಸಿಕೊಂಡಿದ್ದಾಗಿ ತಿಳಿದುಬಂದಿತ್ತು.ತಿಮರೋಡಿ ಮನೆಯಲ್ಲಿ ಇರದ ಕಾರಣ ವಿಚಾರಣೆಗೆ ಹಾಜರಾಗಲು ಈ ಹಿಂದೆ ಎರಡು ಬಾರಿ ತಿಮರೋಡಿ ಮನೆಯ ಗೋಡೆಗೆ ನೋಟಿಸ್ ಅಂಟಿಸಿ ಬಂದಿದ್ದ ಬೆಳ್ತಂಗಡಿ ಪೊಲೀಸರು ಇಂದು ಮತ್ತೆ ಅಂತಿಮ ನೋಟೀಸ್ ಅಂಟಿಸಿದ್ದು, ಸೆ.29ರೊಳಗೆ ವಿಚಾರಣೆಗೆ ಹಾಜರಾಗಲು ನೋಟೀಸ್ ನಲ್ಲಿ ಸೂಚಿಸಲಾಗಿದೆ. ಮಹೇಶ್ ಶೆಟ್ಟಿ ತಿಮರೋಡಿ ತಲೆಮರೆಸಿಕೊಂಡಿದ್ದು,ವಿಚಾರಣೆ ಗೆ ಹಾಜರಾಗ್ತಾರಾ ಕಾದು ನೋಡಬೇಕು