ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಇದರ ಜೇಸಿ ಸಪ್ತಾಹದ ಅಂಗವಾಗಿ ಶ್ರೀ ಗಣೇಶ್ ವೈದ್ಯಕೀಯ ಮತ್ತು ಅಪಘಾತ ಚಿಕಿತ್ಸಾ ಕೇಂದ್ರ ಇದರ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಬೆಳ್ತಂಗಡಿಯ ಬಸ್ ನಿಲ್ದಾಣದಲ್ಲಿ ನಡೆಯಿತು.
ತಾಲೂಕಿನ ಹಿರಿಯ ವೈದ್ಯ ಡಾ.ಕೆ ಶ್ರೀನಿವಾಸ್ ಡೊಂಗ್ರೆಯವರು ದೀಪ ಪ್ರಜ್ವಲಿಸುವುದರ ಮೂಲಕ ಉದ್ಘಾಟಿಸಿದರು.
ಜೆಸಿಐ ಬೆಳ್ತಂಗಡಿಯ ಅಧ್ಯಕ್ಷೆ ಜೆಸಿ ಆಶಾಲತಾ ಪ್ರಶಾಂತ್ ಸ್ವಾಗತಿಸಿದರು. ಗಣೇಶ್ ಕ್ಲಿನಿಕ್ ಇದರ ವೈದ್ಯರು, ಸಿಬ್ಬಂದಿಗಳು ಸಾರ್ವಜನಿಕರ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ತಪಾಸಣೆ ಮತ್ತು ಸಲಹೆ ನೀಡಿದರು.
ಸುಮಾರು ನೂರಕ್ಕೂ ಹೆಚ್ಚು ಸಾರ್ವಜನಿಕರು ರಿಕ್ಷಾ ಚಾಲಕರು ಈ ಶಿಬಿರದ ಪ್ರಯೋಜನ ಪಡೆದರು. ಈ ಸಂದರ್ಭದಲ್ಲಿ ಸಪ್ತಾಹ ನಿರ್ದೇಶಕ ರಕ್ಷಿತ್ ಅಂಡಿಂಜೆ, ಜೆಸಿಐ ಬೆಳ್ತಂಗಡಿಯ ಪೂರ್ವ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.