Site icon Suddi Belthangady

ವೇಣೂರು: ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ರೇಬಿಸ್ ಜಾಗೃತಿ ಕಾರ್ಯಕ್ರಮ

ವೇಣೂರು: ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ಸೆ. 25ರಂದು ಪಶುಸಂಗೋಪನಾ ಇಲಾಖೆ ಬೆಳ್ತಂಗಡಿ ಇದರ ವತಿಯಿಂದ ರೇಬಿಸ್ ಜಾಗೃತಿ ಕಾರ್ಯಕ್ರಮ ನೆರವೇರಿತು.

ಸಂಪನ್ಮೂಲ ವ್ಯಕ್ತಿಯಾಗಿ ಪಶು ಸಂಗೋಪನಾ ಇಲಾಖಾಧಿಕಾರಿ ಸದಾಶಿವ ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾಹಿತಿ ನೀಡಿ, ಪ್ರಾಣಿ ಕಡಿತದ ಸಮಯದಲ್ಲಿ ಪಡೆಯುವ ತಕ್ಷಣದ ಚಿಕಿತ್ಸೆಯೇ ಪರಿಹಾರೋಪಾಯಗಳಲ್ಲಿ ಪ್ರಧಾನ. ಪ್ರಾಣಿಗಳ ಜೊತೆಗಿನ ಒಡನಾಟದ ಬಗ್ಗೆ ಎಚ್ಚರವಿರಲಿ ಎಂದರು.‌

ಪಶುವೈದ್ಯ ನಾಗಶಯನ ರಾವ್ ಮತ್ತು ಎಕ್ಸೆಲ್ ಟೆಕ್ನೋ ಸ್ಕೂಲ್ ನ ಮುಖ್ಯ ಶಿಕ್ಷಕಿ ಸುಜಾತ ಬಿ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ದಿಶಾ ವೈ ಶೆಟ್ಟಿ, ರಂಜಿನಿ, ಸ್ಫೂರ್ತಿ ಪ್ರಾರ್ಥಿಸಿದ ಸಭೆಯನ್ನು ಶಿಕ್ಷಕ ತೀರ್ಥ ಪ್ರಸಾದ್ ಸಮಗ್ರವಾಗಿ ನಿರೂಪಿಸಿದರು . ದೈಹಿಕ ಶಿಕ್ಷಣ ಶಿಕ್ಷಕ ಪ್ರಸಾದ್ , ಗಣಿತ ಶಿಕ್ಷಕ ಸಾರ್ಥಕ್ ಜೈನ್ ಮತ್ತು ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ಸಹಕರಿಸಿದರು.

Exit mobile version