ಬೆಳ್ತಂಗಡಿ: ಬಂಗ್ಲೆಗುಡ್ಡದಲ್ಲಿ ಪತ್ತೆಯಾದ ಮತ್ತೊಂದು ಅಸ್ಥಿಪಂಜರದ ಪಕ್ಕದಲ್ಲಿ ಸಿಕ್ಕಿರುವ ಡ್ರೈವಿಂಗ್ ಲೈಸನ್ಸ್ ಆಧಾರದಲ್ಲಿ ಕುಟುಂಬಸ್ಥರಿಗೆ ಎಸ್. ಐ. ಟಿ ಬುಲಾವ್ ನೀಡಿದೆ. ಬಂಗ್ಲೆಗುಡ್ಡ ಕಾಡಿನಲ್ಲಿ ಅಸ್ಥಿ ಪಂಜರ ಶೋಧದ ವೇಳೆ ತುಮಕೂರು ಜಿಲ್ಲೆಯ ಗುಬ್ಬಿ ಮೂಲದ ಆದಿಶೇಷ ನಾರಾಯಣ ಎಂಬ ಯುವಕನ ಚಾಲನ ಪರವಾನಿಗೆ ಪತ್ತೆಯಾಗಿತ್ತು. DL ಮೂಲಕ ಆದಿಶೇಷ ನಾರಾಯಣ ಕುಟುಂಬಸ್ಥರಿಗೆ ಎಸ್. ಐ.ಟಿ ಬುಲಾವ್ ನೀಡಿದ್ದು, ಆದಿಶೇಷ 2013 ಅ.2ರಿಂದ ನಾಪತ್ತೆಯಾಗಿದ್ದರು. ಬಾರ್ ನಲ್ಲಿ ಕ್ಯಾಶಿಯಾರ್ ಆಗಿ ಕೆಲಸ ಮಾಡುತಿದ್ದ ಯುವಕ ಏಕಾಏಕಿ ನಾಪತ್ತೆಯಾಗಿದ್ದು, ಕುಟುಂಬಸ್ಥರು ಯಾವುದೇ ಪ್ರಕರಣ ದಾಖಲಿಸಿರಲಿಲ್ಲ. ಸದ್ಯ ಬೆಳ್ತಂಗಡಿ ಎಸ್. ಐ. ಟಿ ಕಚೇರಿಗೆ ಆದಿಶೇಷನ ಅಕ್ಕಂದಿರು, ಬಾವ ಆಗಮಿಸಿದ್ದು, ಡಿ.ಎನ್.ಎ ಟೆಸ್ಟ್ ಗಾಗಿ ಮತ್ತೆ ಬರಲು ಎಸ್.ಐ.ಟಿ ಸೂಚಿಸಿದೆ.
ಧರ್ಮಸ್ಥಳದಲ್ಲಿ ಸಿಕ್ಕ ಮತ್ತೊಂದು ಅಸ್ಥಿಪಂಜರದ ಪಕ್ಕ ಸಿಕ್ಕ ಡಿ.ಎಲ್. ಗುರುತು ಪತ್ತೆ-SIT ಕಚೇರಿಗೆ ತುಮಕೂರಿನ ಗುಬ್ಬಿ ಮೂಲದ ಆದಿಶೇಷ ನಾರಾಯಣನ ಮನೆಯವರ ಆಗಮನ
