Site icon Suddi Belthangady

ತೋಟತ್ತಾಡಿ: 9ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜೋತ್ಸವ

ತೋಟತ್ತಾಡಿ: ಧರ್ಮರಕ್ಷಾ ವೇದಿಕೆ ಆಶ್ರಯದಲ್ಲಿ 9ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೊಜೋತ್ಸವ ಸೆ. 29ರಂದು ಶ್ರೀ ನಾರಾಯಣ ಗುರು ಧರ್ಮಪರಿಪಾಲನಾ ಯೋಗಂ SNDP ಶಾಖೆ, ಬೆಂದ್ರಾಳ ತೋಟತ್ತಾಡಿಯಲ್ಲಿ ನಡೆಯಲಿದೆ. ಬೆಳಿಗ್ಗೆ 8:00 ಗಂಟೆಗೆ ವೇದಮೂರ್ತಿ ವಾದಿರಾಜ ಶಬರಾಯ ಉಜಿರೆ ಅವರ ಪೌರೋಹಿತ್ಯದಲ್ಲಿ,”ಗಣಹೋಮ ಹಾಗೂ ಶ್ರೀ ಶಾರದಾ ದೇವಿಯ ಮೂರ್ತಿ ಪ್ರತಿಷ್ಠೆ”, ತದನಂತರ ಆಹ್ವಾನಿತ ವಿವಿಧ ಭಜನಾ ತಂಡಗಳಿಂದ ಭಜನೆ, ಧಾರ್ಮಿಕ ಸಭಾ ಕಾರ್ಯಕ್ರಮ.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಎಕ್ಸೆಲ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಜ್ವಲ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಧಾರ್ಮಿಕ ಮುಖಂಡರು ಹಾಗೂ ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ, ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ವಂದನಾ ಎಂ. ಇರ್ವತ್ರಾಯ, ಚಾರ್ಮಾಡಿ ಗ್ರಾ. ಪಂ. ಅಧ್ಯಕ್ಷೆ ಶಾರದಾ ಎ., ನಾರಾಯಣ ಗುರು ಎಸ್.ಎನ್.ಡಿ.ಪಿ ಸಂಘದ ಅಧ್ಯಕ್ಷ ಸುರೇಶ್ ಎಂ. ಎನ್., ಭಾಗವಹಿಸಲಿದ್ದು, ಧರ್ಮರಕ್ಷಾ ವೇದಿಕೆ, ತೋಟತ್ತಾಡಿ ಇದರ ಅಧ್ಯಕ್ಷ ಪ್ರಸಾದ್ ಮಡಿಯೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮಧ್ಯಾಹ್ನ “ಮಹಾಪೂಜೆ ನಂತರ ಸಾರ್ವಜನಿಕ ಅನ್ನಸಂತರ್ಪಣೆ”.

ಮಧ್ಯಾಹ್ನ 2ರಿಂದ ವಿವಿಧ ಆಹ್ವಾನಿತ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ಮಹಾಪೂಜೆ, ಶ್ರೀ ಶಾರದಾ ದೇವಿ ಮೂರ್ತಿಯ ವೈಭವಯುತ ಶೋಭಾಯಾತ್ರೆ ನಡೆಯಲಿದೆ.

Exit mobile version