Site icon Suddi Belthangady

ಪಾರಸ್ ಪೃಥ್ವಿ ಜ್ಯುವೆಲ್ಸ್ ನಲ್ಲಿ ದಸರಾ ಹಾಗೂ ದೀಪಾವಳಿ ಜೋಡಿಹಬ್ಬದ ಪ್ರಯುಕ್ತ ಮಹಾಪರ್ವ ಆರಂಭ

ಬೆಳ್ತಂಗಡಿ: ಕಳೆದ 7 ವರ್ಷಗಳಿಂದ ಬೆಳ್ತಂಗಡಿಯಲ್ಲಿ ಚಿನ್ನ, ಬೆಳ್ಳಿ, ವಜ್ರದ ಆಭರಣಗಳ ಮಾರಾಟ ಸೇವೆಯನ್ನು ನೀಡುತ್ತಿರುವ ಪಾರಸ್ ಪೃಥ್ವಿ ಜ್ಯುವೆಲ್ಸ್ ನಲ್ಲಿ ಪ್ರತೀ ವರ್ಷದಂತೆ ದಸರಾ ಹಾಗೂ ದೀಪಾವಳಿಯ ಜೋಡಿಹಬ್ಬದ ಪ್ರಯುಕ್ತ ಪ್ರಾರಂಭವಾಗುವ ಮಹಾಪರ್ವ ಮೇಳವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಅರ್ಚಕರಾದ ನಾಗರಾಜ್ ಕಾರಂತ್ ಅವರು ಉದ್ಘಾಟಿಸಿದರು.

ಎಸ್‌.ಡಿ.ಎಂ ಸಮೂಹ ಸಂಸ್ಥೆಯ ನಿವೃತ್ತ ಶಿಕ್ಷಕ ಮನೋರಮ ಮಾತನಾಡಿ ಬಹಳ ವಿಶಿಷ್ಟವಾದ ಹಿಂದೂ ಪದ್ಧತಿಯ ದಸರಾ ಹಬ್ಬದ ಸುಸಂದರ್ಭದಲ್ಲಿ ಪ್ರಾರಂಭವಾಗಿರುವ ಮಹಾಪರ್ವ ಯಶಸ್ವಿಯಾಗಿ ನಡೆದು ಗ್ರಾಹಕರಿಗೆ ಪ್ರಯೋಜನವಾಗಲಿ ಎಂದರು.

ಮಹಾಪರ್ವ ಆಫರ್ ಮೇಳವು ಸೆ.25ರಂದು ಆರಂಭವಾಗಿದ್ದು ಗ್ರಾಹಕರಿಗೆ ವಿಶಿಷ್ಟ ವಿನ್ಯಾಸದ ಆಭರಣಗಳನ್ನು ಪರಿಚಯಿಸಿಕೊಂಡು ನ.2ರವರೆಗೆ ಮುಂದುವರೆಯಲಿದ್ದು ಗ್ರಾಹಕರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಖಾ ಪ್ರಬಂಧಕ ಅಶೋಕ್ ಬಂಗೇರ ಹೇಳಿದರು. ಶಾಖಾ ಪ್ರಬಂಧಕ ಅಶೋಕ್ ಬಂಗೇರ ಪ್ರಾಸ್ತಾವಿಕವಾಗಿ ಸ್ವಾಗತಿಸಿ, ಶಾಖಾ ಸಿಬ್ಬಂದಿಗಳು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Exit mobile version