Site icon Suddi Belthangady

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಶಾಂತಿವನದಲ್ಲಿ ಸಿಂದೂರ ಲೋಕಾರ್ಪಣೆ-ಸಿಂದೂರ ಶುಭ ಸಂಕೇತ: ಶ್ರದ್ಧಾ ಅಮಿತ್-1987ರಲ್ಲಿ ಸಣ್ಣ ಕೋಣೆ ಎಲಿಮೆಂಟ್ರಿ ಶಾಲೆಯಲ್ಲಿ ಪ್ರಕೃತಿ ಚಿಕಿತ್ಸೆ ಪ್ರಾರಂಭಿಸಲಾಗಿತ್ತು: ಸುಪ್ರಿಯಾ ಹರ್ಷೇಂದ್ರ ಕುಮಾರ್

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಶಾಂತಿವನದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಡಿ. ಹರ್ಷೇಂದ್ರ ಕುಮಾರ್‌ರವರ ಮಾರ್ಗದರ್ಶನದೊಂದಿಗೆ ಧರ್ಮಸ್ಥಳದ ಶಾಂತಿವನ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ಸಾಧಕರ ಸೇವೆಗಾಗಿ ಅತ್ಯಾಧುನಿಕ ಮಾದರಿಯಲ್ಲಿ ಸರ್ವಸುಸಜ್ಜಿತವಾಗಿ, ಪುನರ್ ನವೀಕರಣಗೊಂಡಿರುವ ಮಹಿಳೆಯರ ಚಿಕಿತ್ಸಾ ವಿಭಾಗ “ಸಿಂದೂರ” ಸೆ. 25ರಂದು ಕ್ಷೇಮವನ ನಿರ್ದೇಶಕಿ ಶ್ರದ್ದಾ ಅಮಿತ್ ರವರು ಲೋಕಾರ್ಪಣೆಗೊಳಿಸಿದರು.

ನಂತರ ಮಾತನಾಡಿ ಡಾ. ರುದ್ರಪ್ಪ ನೇತೃತ್ವದಲ್ಲಿ ಶಾಲೆಯಲ್ಲಿ 2ಬೆಡ್ ನಿಂದ ಪ್ರಾರಂಭಗೊಂಡಿತು. ಸಿಂದೂರ ಎಂಬ ಶುಭ ಸಂಕೇತ, ನವರಾತ್ರಿ ಸಂದರ್ಭದಲ್ಲಿ ಪ್ರಾರಂಭಗೊಂಡಿದೆ. ನೇತ್ರಾವತಿ ನದಿ ತಪ್ಪಲಲ್ಲಿ ಕಾಡಿನ ಮದ್ಯೆ ಕಂಗೊಳಿಸುತ್ತಿದೆ ಎಂದರು. ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್ ಮಾತನಾಡಿ ಪ್ರ ಪ್ರಥಮ ಧರ್ಮಸ್ಥಳದ ಎಲಿಮೆಂಟ್ರಿ ಶಾಲೆಯಲ್ಲಿ ಪ್ರಕೃತಿ ಚಿಕಿತ್ಸೆ ಪ್ರಾರಂಭಿಸಲಾಗಿತ್ತು. ರೂ. 5ರೂಪಾಯಿಯಲ್ಲಿ ಎಲ್ಲ ಚಿಕಿತ್ಸೆ ಮತ್ತು ಸೌಲಭ್ಯ ದೊರೆಯುತ್ತಿತ್ತು. ಇದೀಗ ಉಡುಪಿ, ಬೆಂಗಳೂರು ನಲ್ಲಿಯೂ ವಿಸ್ತರಿಸಲಾಗಿದೆ. ದೊಡ್ಡ ಮಟ್ಟದಲ್ಲಿ ಬೆಳೆದಿದೆ ಎಂದರು.

ಉಜಿರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ ಸತೀಶ್ಚಂದ್ರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್‌ ಶೆಟ್ಟಿ, ಡಾ. ಪ್ರಶಾಂತ್ ಶೆಟ್ಟಿ ಸರ್, ಆಡಳಿತಧಿಕಾರಿ ಜಗನಾಥ್ ಯು., ಉಪಸ್ಥಿತರಿದ್ದರು. ಕ್ಷೇಮವನ ನಿರ್ದೇಶಕಿ ಶ್ರದ್ಧಾ ಅಮಿತ್, ಸುಪ್ರಿಯಾ ಹರ್ಷೇಂದ್ರಕುಮಾರ್, ಡಾ. ಪ್ರಶಾಂತ್ ಶೆಟ್ಟಿ, ಸೀತಾರಾಮ ತೋಲ್ಪಡಿತ್ತಾಯ, ಡಾ. ಶಿವಪ್ರಸಾದ್ ಶೆಟ್ಟಿ, ಆಡಳಿತಧಿಕಾರಿ ಜಗನ್ನಾಥ್ ಅವರನ್ನು ಗೌರವಿಸಲಾಯಿತು. ಧರ್ಮಸ್ಥಳ ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ. ಸೀತಾರಾಮ ತೊಲ್ಪಡಿತ್ತಾಯ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಡಾ. ಸುಜಾತಾ ದಿನೇಶ್ ವಂದಿಸಿದರು.

Exit mobile version