ಬೆಳ್ತಂಗಡಿ: ಎಸ್.ಐ.ಟಿ ಅಧಿಕಾರಿಗಳು ಸೆ.17ರಂದು ಬಂಗ್ಲೆ ಗುಡ್ಡೆಯಲ್ಲಿ ಶೋಧ ನಡೆಸುವಾಗ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಟಿ ಶೆಟ್ಟಿಗೇರಿ ಗ್ರಾಮ ವ್ಯಾಪ್ತಿಯ ನಿವಾಸಿ ಯು. ಬಿ. ಅಯ್ಯಪ್ಪ(65) ಎನ್ನುವವರದ್ದು ಐಡಿ ಪತ್ತೆಯಾಗಿತ್ತು.ಇವರು 2017ರಲ್ಲಿ ಕಾಣೆಯಾಗಿದ್ದರು. ಇವರು ಮೈಸೂರಿನ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಹೋಗುವುದಾಗಿ ಹೇಳಿ ಹೋಗಿದ್ದ ಅಯ್ಯಪ್ಪ, ಅಂದಿನಿಂದ ಕಾಣೆಯಾಗಿದ್ದರು. ಹೀಗಾಗಿ ಸಿಕ್ಕ ಅಸ್ಥಿಪಂಜರ ಸಹ ಅಯ್ಯಪ್ಪನವರದ್ದೇ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಅಯ್ಯಪ್ಪ ಕಾಣೆಯಾಗಿರುವ ಬಗ್ಗೆ ಅವರ ಪುತ್ರ ಉಳುವಂಗಡ ಜೀವನ್ ಎನ್ನುವರು ನೀಡಿದ ದೂರಿನ ಮೇರೆಗೆ 25-6-2017ರಂದು ಶ್ರೀಮಂಗಲ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಸೆ.20ರಂದು ಅಯ್ಯಪ್ಪರ ಪುತ್ರ ಉಳುವಂಗಡ ಜೀವನ್ ಎಸ್ ಐ ಟಿ ಕಚೇರಿಗೆ ಭೇಟಿ ನೀಡಿದ್ದರು. ಸೆ.25ರಂದು ಮತ್ತೆ ಎಸ್.ಐ.ಟಿ ಕಚೇರಿಗೆ ಆಗಮಿಸಿದ್ದಾರೆ.