ಬೆಳ್ತಂಗಡಿ: ರಾಜ್ಯ ಸರ್ಕಾರ ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸಲು ಕ್ರಮ ಕೈಗೊಂಡಿದೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ, 1.20 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಇರುವವರು ಮತ್ತು ಅನರ್ಹ ಎಂದು ಗುರುತಿಸಲಾಗಿರುವ ಸುಮಾರು ಬೆಳ್ತಂಗಡಿ ತಾಲೂಕಿನಲ್ಲಿ ಸುಮಾರು 2683 ಪಡಿತರ ಚೀಟಿಗಳನ್ನು ಆಹಾರ ಇಲಾಖೆ ಪತ್ತೆ ಹಚ್ಚಿದ್ದು, ಅವುಗಳ ರದ್ದು ಪ್ರಕ್ರಿಯೆ ಆರಂಭವಾಗಿದೆ. ಸುಳ್ಳು ಮಾಹಿತಿ ನೀಡಿ ಅನರ್ಹರು ಪಡೆದ ಅಂತ್ಯೋದಯ, ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡುವ ಕಾರ್ಯಕ್ಕೆ ಆಹಾರ ಇಲಾಖೆ ಚಾಲನೆ ನೀಡಿದ್ದು, ಕಾರ್ಡ್ ರದ್ದಾದವರ ಮಾಹಿತಿಯನ್ನು ನ್ಯಾಯಬೆಲೆ ಅಂಗಡಿಗಳ ಮುಂದೆ ಪ್ರಕಟಿಸಿದೆ. ಇನ್ನು ಕೆಲವರಿಗೆ ನೋಟಿಸ್ ನೀಡಿದ್ದು, ಕಾರ್ಡ್ ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಅನ್ನಭಾಗ್ಯ ಯೋಜನೆಯ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ ಗಳನ್ನು ಪಡೆಯಲು ಅರ್ಹತೆ ಇಲ್ಲದಿದ್ದರೂ ಸುಳ್ಳು ಮಾಹಿತಿ ನೀಡಿ ಅಂತ್ಯೋದಯ ಅಥವಾ ಬಿಪಿಎಲ್ ಕಾರ್ಡ್ ಪಡೆದಿದ್ದರೆ ಅಂಥವರ ಮಾಹಿತಿ ತೆರಿಗೆ ಇಲಾಖೆ, ಕಂದಾಯ ಇಲಾಖೆ, ಆರ್‌ಟಿಓ ಕಚೇರಿಗಳು, ಬ್ಯಾಂಕ್ ಇತ್ಯಾದಿ ಮೂಲಗಳಿಂದ ಪಡೆಯಲಾಗಿರುವ ಡೇಟಾಗಳಿಂದ ಪತ್ತೆ ಮಾಡಲಾಗುತ್ತಿದೆ.
ನೋಟಿಸ್ ಪ್ರಕಟ: ಅರ್ಹತೆ ಇಲ್ಲದಿದ್ದರೂ ಬಿಪಿಎಲ್, ಅಂತ್ಯೋದಯ ಕಾರ್ಡ್ ಪಡೆದಿರುವವರ ಮಾಹಿತಿಯನ್ನು ನ್ಯಾಯಬೆಲೆ ಅಂಗಡಿಗಳ ಮುಂದೆ ಪ್ರಕಟಿಸಲಾಗುತ್ತಿದೆ. ಇನ್ನೂ ಕೆಲವರ ಮನೆಗಳಿಗೆ ನೋಟಿಸ್‌ಗಳನ್ನು ಆಹಾರ ಇಲಾಖೆ ನೀಡಿದ್ದು, ದಾಖಲೆ ಸಮೇತ ಸ್ಪಷನೆ ನೀಡಲು ಅವಕಾಶವೊಂದನ್ನು ನೀಡಿದೆ. ಒಂದು ವೇಳೆ ಸಮರ್ಪಕ ದಾಖಲೆ ಇಲ್ಲದಿದ್ದರೆ ಅಂತಹ ವ್ಯಕ್ತಿಗಳು ಪಡೆದಿರುವ ಅನ್ನಭಾಗ್ಯ ಯೋಜನೆಯ ಕಾರ್ಡ್ ಗಳು ರದ್ದಾಗಲಿವೆ.
ಯಾರು ಅನರ್ಹರು? ತೆರಿಗೆ ಪಾವತಿಸುವವರು, ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರು ಇರುವ ಕುಟುಂಬ, ನಗರ ಪ್ರದೇಶಗಳಲ್ಲಿ ಮನೆಗಳನ್ನು ಬಾಡಿಗೆ ಕೊಟ್ಟಿರುವವರು, ಸ್ವಂತಕ್ಕೆಂದು ನಾಲ್ಕು ಚಕ್ರದ ವಾಹನ ಹೊಂದಿರುವವರು, 7.5 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವವರು ಸೇರಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಪಡೆಯಲು ಅನರ್ಹರಾಗಿದ್ದಾರೆ.
ತಾಲೂಕಿನಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಅನರ್ಹ ಕಾರ್ಡ್: ತಾಲೂಕಿನಲ್ಲಿ 2683 ಅನರ್ಹ ಪಡಿತರ ಕಾರ್ಡ್ ಈಗಾಗಲೇ ಪತ್ತೆ ಮಾಡಿ ನೋಟಿಸ್ ನೀಡಿದ್ದು ಅಂತಹವರು ಸೂಕ್ತ ದಾಖಲೆಯೊಂದಿಗೆ ಬೆಳ್ತಂಗಡಿ ಆಹಾರ ಶಾಖೆಗೆ ಭೇಟಿ ನೀಡಬೇಕು ಎಂದು ತಿಳಿಸಿದ್ದಾರೆ
ಬೇಕಾಗುವ ದಾಖಲೆ: ಪಟ್ಟಿಯಲ್ಲಿರುವ ಜಾತಿ ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಡಿತರ ಚೀಟಿ, ಮನೆಯ ಪೋಟೋದೊಂದಿಗೆ ಒಂದು ವಾರದೊಳಗೆ ತಾಲೂಕು ಕಚೇರಿಯ ಆಹಾರ ಶಾಖೆಗೆ ಭೇಟಿ ನೀಡಬೇಕು ಎಂದು ತಿಳಿಸಿದ್ದಾರೆ. ಕಾರ್ಡ್ ದರರು ತಮ್ಮ ಅರ್ಹತೆಯನ್ನು ದೃಢಪಡಿಸಿದಲ್ಲಿ ಮಾತ್ರ ಬಿಪಿಎಲ್ ಆಗಿ ಉಳಿಯುತ್ತದೆ. ಇಲ್ಲವಾದಲ್ಲಿ ಪಡಿತರ ಚೀಟಿ ಎ.ಪಿ.ಎಲ್‌ಯಾಗಿ ಆಗುತ್ತದೆ.
ತಾಲೂಕಿನ ಗ್ರಾಮವಾರು ಪಟ್ಟಿಯ ವಿವಿರ: ಅಳದಂಗಡಿ 50, ಅಂಡಿಂಜೆ 59, ಆರಂಬೋಡಿ 86, ಅರಸಿನಮಕ್ಕಿ 43, ಬಳಂಜ 68, ಬಂದಾರು 38, ಬಾರ್ಯ 43, ಬೆಳಾಲು 27, ಚಾರ್ಮಾಡಿ 96, ಧರ್ಮಸ್ಥಳ 84, ಹೊಸಂಗಡಿ 40, ಇಮಂತಿಳ 36, ಇಂದಬೆಟ್ಟು 38, ಕಡಿರುದ್ಯಾವರ 17, ಕಳೆಂಜ 34, ಕಳಿಯ 47, ಕಲ್ಮಂಜ 62, ಕಣಿಯೂರು 54, ಕಾಶಿಪಟ್ಣ 18, ಕೊಕ್ಕಡ 36, ಕೊಯ್ಯೂರು 33, ಕುಕ್ಕೇಡಿ 38, ಕುವೆಟ್ಟು 108, ಲಾಯಿಲ 79, ಮಚ್ಚಿನ 47, ಮಡಂತ್ಯಾರು 58, ಮಾಲಾಡಿ 75, ಮಲವಂತಿಗೆ 30, ಮರೋಡಿ 47, ಮೇಲಂತಬೆಟ್ಟು 60, ಮಿತ್ತಬಾಗಿಲು 20, ಮುಂಡಾಜೆ 50, ನಡ 58, ನಾರಾವಿ 59, ನಾವೂರು 21, ನೆರಿಯ 23, ನಿಡ್ಲೆ 15, ಪಡಂಗಡಿ 90, ಪಟ್ರಮೆ 11, ಪುದುವೆಟ್ಟು 14, ಶಿಬಾಜೆ 19, ಶಿರ್ಲಾಲು 44, ಶಿಶಿಲ 13, ಸುಲ್ಕೇರಿ 25, ತಣ್ಣೀರುಪಂತ 64, ತೆಕ್ಕಾರು 13, ಉಜಿರೆ 153, ವೇಣೂರು 113.
ಹೆಚ್ಚಿನ ಮಾಹಿತಿಗಾಗಿ https://in.docworkspace.com/d/sICWO6uTEAr_ysMYG?sa=601.1205 ವೆಬ್ ಸೈಟ್ ಗೆ ಭೇಟಿ ನೀಡಿ.