Site icon Suddi Belthangady

ಓಡದಕರಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಮಹೋತ್ಸವ

ಲಾಯಿಲ: ಓಡದಕರಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವವರಾತ್ರಿ ಪೂಜಾ ಮಹೋತ್ಸವವು ಸೆ. 22ರಂದು ಪ್ರಾರಂಭಗೊಂಡು ಅ.2ರವರೆಗೆ ವಿಜೃಂಭಣೆಯಿಂದ ಜರುಗಲಿದೆ. ನವರಾತ್ರಿಯ ಎಲ್ಲಾ ದಿನಗಳಲ್ಲಿ ರಾತ್ರಿ ವಿವಿಧ ಆಹ್ವಾನಿತ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಮಹಾಪೂಜೆ ವಿರಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ.

ಸೆ.22ರಂದು ಬೆಳಿಗ್ಗೆ ಗಣಹೋಮ, ಪಂಚಾಮೃತಾಭಿಷೇಕ, ತೋರಣ ಮುಹೂರ್ತ, ತೆನೆ ಮುಹೂರ್ತ ಜರುಗಿತು. ಸೆ.27ರಂದು ಬೆಳಿಗ್ಗೆ ನವಕ ಪ್ರಧಾನ ಕಲಶಾಭಿಷೇಕ, ನಾಗ-ನಾಗಬ್ರಹ್ಮ ಸಾನಿಧ್ಯದಲ್ಲಿ ನಾಗತಂಬಿಲ, ಸಂಜೆ ಶ್ರೀ ದುರ್ಗಾನಮಸ್ಕಾರ ಪೂಜೆ ಜರಗುವುದು. ಅ.2ರಂದು ಬೆಳಿಗ್ಗೆ ಪಂಚಾಮೃತ ಅಭಿಷೇಕ, ನಾಗ-ನಾಗಬ್ರಹ್ಮ ಸಾನಿಧ್ಯದಲ್ಲಿ ನಾಗತಂಬಿಲ, ಅಶ್ವತ್ಥ ಪೂಜೆ, ನಾಗತಂಬಿಲ, ಪರಿವಾರ ದೈವಗಳಿಗೆ ಪರ್ವ, ಮಧ್ಯಾಹ್ನ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಸಂಜೆ ರಂಗ ಪೂಜೆ ನೆರವೇರಲಿರುವುದು.

Exit mobile version