Site icon Suddi Belthangady

ನಾರಾವಿಯಲ್ಲಿ ವಸ್ತ್ರಮ್ ಕಲೆಕ್ಷನ್ ಶುಭಾರಂಭ

ಬೆಳ್ತಂಗಡಿ: ನಾರಾವಿಯು ಜೈನ್ ಕಾಂಪೆಕ್ಸ್‌ನಲ್ಲಿ ಸೆ.24ರಂದು ಗೋವಿಂದ ದೇಸಾಯಿ ಮಾಲಿಕತ್ವದ ವಸ್ತ್ರಮ್ ಕಲೆಕ್ಷನ್ ಶುಭಾರಂಭಗೊಂಡಿದೆ. ಜೈನ್ ಕಾಂಪೆಕ್ಸ್‌ನ ಮಾಲಕ ಸನತ್ ಕುಮಾರ್ ಹೆಗ್ಡೆ ದೀಪ ಪ್ರಜ್ವಲನೆ ಮಾಡಿದರು. ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜವರ್ಮ ಜೈನ್ ಉದ್ಘಾಟನೆ ಮಾಡಿದರು.

ನಾರಾವಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ್ ಭಂಡಾರಿ ಮಾತನಾಡಿ, ವಸ್ತ್ರಮ್ ಕಲೆಕ್ಷನ್ ಸಂಸ್ಥೆ ನಾರಾವಿಯಲ್ಲಿ ಶುಭಾರಂಭಗೊಂಡಿದೆ. ಇಲ್ಲಿನ ಜನರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.

ನಾರಾವಿ ಗ್ರಾ.ಪಂ ಅಧ್ಯಕ್ಷ ರಾಜವರ್ಮ ಜೈನ್ ಮಾತನಾಡಿ, ವಸ್ತ್ರಮ್ ಕಲೆಕ್ಷನ್ ಸಂಸ್ಥೆ ಉನ್ನತ ಮಟ್ಟಕ್ಕೆ ಬೆಳೆಯಲಿ, ಇಂತಹ ಅಂಗಡಿಗಳು ಹತ್ತು ಕಡೆಗಳಲ್ಲಿ ತೆರೆಯುವಂತಾಗಲಿ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ನಾರಾವಿ ಗಣೇಶ್ ಮೆಡಿಕಲ್ ಮಾಲಕ ರವಿ ಪ್ರಸಾದ್, ನಾರಾವಿ ಐಸಿರಿ ಎಂಟರ್ ಪ್ರೈಸಸ್ ಸಂಸ್ಥೆಯ ಮಾಲಕ ಯೋಗೀಶ್, ನಾರಾವಿ ಪೂಜಾ ಕೋಲ್ಡ್ ಹೌಸ್‌ನ ಮಾಲಕ ರಾಕೇಶ್, ನಾರಾವಿ ಮೇಧಾ ಬ್ಯಾಗ್ ಉತ್ಪಾದಕ ಸಂಸ್ಥೆಯ ಮಾಲಿಕರಾದ ಶಾಂಭವಿ ಉಪಸ್ಥಿತರಿದ್ದರು. ನಾರಾವಿ ಅಜಯ ಜನರಲ್ ಸ್ಟೋರ್ ಮಾಲಕ ಭಾಸ್ಕರ್ ಸ್ವಾಗತಿಸಿ, ಧನ್ಯವಾದವಿತ್ತರು.

Exit mobile version