Site icon Suddi Belthangady

ಮೇಲಂತಬೆಟ್ಟು: ಗ್ರಾ.ಪಂ. ಗ್ರಾಮ ಸಭೆ

ಮೇಲಂತಬೆಟ್ಟು: ಗ್ರಾಮ ಪಂಚಾಯತ್ ನ 2025-26ನೇ ಸಾಲಿನ ಮೊದಲ ಸುತ್ತಿನ ಗ್ರಾಮ ಸಭೆಯು ಸೆ. 24ರಂದು ಮುಂಡೂರು ಸ. ಹಿ. ಪ್ರಾ. ಶಾಲೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾರವರ ಅಧ್ಯಕ್ಷತೆಯಲ್ಲಿ ಜರಗಿತು.

ನೋಡೆಲ್ ಅಧಿಕಾರಿಯಾಗಿ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಿದ್ದಲಿಂಗಸ್ವಾಮಿ ಡಿ. ಸಿ. ಭಾಗವಹಿಸಿ ಸಭೆಯನ್ನು ಮುನ್ನಡೆಸಿದರು. ಹಲವು ಕಡೆಗಳಲ್ಲಿ ಚರಂಡಿ ರಿಪೇರಿ ಹೇಳಿದ್ದಿರಿ, ಚರಂಡಿಗಳು ಹಾಗೆನೇ ಇದೆ ಎಂದು ಸಚಿನ್ ಕುಮಾರ್ ಹೇಳಿದರು. ಕಲ್ಲಗುಡ್ಡೆ ಮೇಲಂತಬೆಟ್ಟು ರಸ್ತೆ ಮಧ್ಯೆ ಗುಂಡಿ ಬಿದ್ದು ವಾಹನ ಚಾಲಕರು ತೊಂದರೆ ಅನುಭವಿಸುತ್ತಾರೆ, ಸವಣಾಲು ರಸ್ತೆಯಲ್ಲಿ ಲಾಯಿಲ ಗ್ರಾಮ ಪಂಚಾಯತ್ ನವರು ಪೈಪ್ ಕಾಮಗಾರಿ ಮಾಡ್ತಾ ಇದ್ದಾರೆ. ರಸ್ತೆ ಡ್ಯಾಮೇಜ್ ಆಗಿದೆ ಅದು ಆಡಳಿತ ಮಂಡಳಿ ಗಮನಿಸಬೇಕು. ಎರ್ಮಯ್ ಬಳಿ ಕಸ ಬಿಸಾಡಿದವರ ಪೂರ್ಣ ಮಾಹಿತಿ ನೀಡಲಾಗಿತ್ತು, ಏನೂ ಕ್ರಮ ಕೈಗೊಂಡಿದ್ದೀರಿ ಎಂದು ವಿನ್ಸ್ಸೆಂಟ್ ಪಿಂಟೊ ಗ್ರಾಮ ಸಭೆಯಲ್ಲಿ ಗಮನಕ್ಕೆ ತಂದರು.

ಮೇಲಂತಬೆಟ್ಟು ಸವನಾಲು ಮಸೀದಿ ಹೋಗುವ ರಸ್ತೆ ಬಳಿ ರಸ್ತೆ ರಿಪೇರಿ, ಮೋರಿ ರಚನೆ ಬಗ್ಗೆ ಮನವಿ ಮಾಡಲಾಗಿತ್ತು, ಇದುವರೆಗೂ ಮಾಡಿಲ್ಲ ಎಂದು ಗ್ರಾಮಸ್ಥರು ದೂರಿದರು. ಗೊಳಿದಲೆಕ್ಕಿ ಕಾಲೋನಿ, ನೂಜೋಡಿ ರಸ್ತೆಯಲ್ಲಿ ಬೀದಿ ದೀಪ ಇಲ್ಲ. ಕೆಲ ಜಾಗದಲ್ಲಿ ಬೇಕಾಬಿಟ್ಟಿ ಬೀದಿ ದೀಪ ಇದೆ ಎಂದು ಗ್ರಾಮಸ್ಥರು ದೂರಿದರು. 70ವರ್ಷದ ಹಳೆಯ ಮುಂಡೂರು ಶಾಲೆ ಕಟ್ಟಡ ತೀವ್ರ ಹಾನಿಗೀಡಾಗಿದೆ ಇದಕ್ಕೆ ಶಿಕ್ಷಣ ಇಲಾಖೆ ಕ್ರಮ ಕೈ ಗೊಳ್ಳಲು ಶಾಲಾಭಿವೃದ್ಧಿ ಅಧ್ಯಕ್ಷರು ಅಗ್ರಹಿಸಿದರು.

ಗ್ರಾಮ ಸಭೆಗೆ ಗ್ರಾಮಸ್ಥರು ಕೊರತೆ, ಸೊಸೈಟಿಗಳ ಮಹಾಸಭೆಗೆ ಜನ ಬರುತ್ತಾರೆ. ಜನ ಹಾಜರಾಗುವ ಬಗೆ ಏನಾದರು ಹೊಸ ಯೋಜನೆ ರೂಪಿಸಬೇಕಾಗಿ ವಿನಂತಿಸಿದರು. ಪೋಕ್ರೋಡಿ ಬಳಿ ಯಾವುದೇ ಕಾಮಗಾರಿ ನಡೆಯುವುದೇ ಇಲ್ಲ. ನೀರಿನ ಸಮಸ್ಯೆ ಬಾವಿ ತೊಡಲು ಏನೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಅಂಗವಿಕಲ ಚೇತನರ ಮನೆಗಳಿಗೆ ಹೋಗುವ ರಸ್ತೆ ರಿಪೇರಿ ಮಾಡುವ ಬಗ್ಗೆ ಸ್ಮಶಾನ ನಿರ್ವಹಣೆ ಬಗೆ, ದನಗಳನ್ನು ಬಿಟ್ಟು ರಸ್ತೆಯಲ್ಲಿಯೇ ಅಡ್ಡ ದಿಡ್ಡಿ ಮತ್ತು ಕೃಷಿ ಭೂಮಿ ನಾಶ ಮಾಡುತ್ತಿದೆ. ಕಸ ರಸ್ತೆ ಬದಿ ಬಿಸಾಡಿ ಹೋಗುತ್ತಾರೆ. ಅರಣ್ಯ ಇಲಾಖೆಯಲ್ಲಿ ಗಿಡ ವಿತರಣೆ ಸರಿಯಾಗಿ ನಿರ್ವಹಿಸುವ ಸೂಕ್ತ ಎಂದು ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿರ್ಮಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಜಮಾ ಖರ್ಚಿನ ವಿವರ, ವಾರ್ಡ್ ಸಭೆಯ ಮಾಹಿತಿ ನೀಡಿದರು. ಉಪಾಧ್ಯಕ್ಷ ಲೋಕನಾಥ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ್ ಕುಮಾರ್, ಚಂದ್ರರಾಜ್ ಎಂ., ವೇಣುಗೋಪಾಲ್ ಶೆಟ್ಟಿ, ದೀಪಿಕಾ, ಹರಿಣಾಕ್ಷಿ, ಚಂದ್ರಶೇಖರ್, ಪ್ರಭಾಕರ್ ಆಚಾರ್ಯ, ಶಶಿಕಲಾ, ಜಯಲಕ್ಷ್ಮಿ, ಸುಮಲತಾ, ಇಲಾಖಾ ಅಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

Exit mobile version