Site icon Suddi Belthangady

ಶೈಕ್ಷಣಿಕ ಸವಾಲುಗಳಿಗೆ ತಂತ್ರಜ್ಞಾನದ ಪರಿಹಾರ ಹುಡುಕುವ ಹ್ಯಾಕಥಾನ್

ಉಜಿರೆ: ಶ್ರೀ ಧರ್ಮಸ್ಧಳ ಮಂಜುನಾಥೇಶ್ವರ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಡಿಲೈತ್‌ ಬೆಂಗಳೂರು ಹಾಗೂ ISTE ಸಹಭಾಗಿತ್ವದೊಂದಿಗೆ ” ಎಜು – ಟೆಕ್ – ಲೈಫ್‌ಟೂಲ್ಸ್” ಎಂಬ
ವಿಷಯದ ಕುರಿತು ಸೆ.18 ಮತ್ತು 19ರಂದು ” ಇನ್ನೋವೇಟ್-ಎ-ಥಾನ್ ” (Innovate-A- Thon) ಎನ್ನುವ ಎರಡು ದಿನದ ಹ್ಯಾಕಥಾನ್ ಅಯೋಜಿಸಲಾಗಿತ್ತು.

ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರಿನ ಹೆಲ್ತ್‌ಕೇರ್ ಟೆಕ್ನಾಲಜಿ ನಿರ್ದೇಶಕ ಸುನಿಲ್ ಪುರೋಹಿತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅವರು ಬದಲಾಗುತ್ತಿರುವ ತಂತ್ರಜ್ಞಾನ ಕ್ಷೇತ್ರದಲ್ಲಿ
ನಿರಂತರ ಕಲಿಕೆ, ಮತ್ತು ಸೃಜನಾತ್ಮಕ ಆಲೋಚನೆಗಳನ್ನು ಉದ್ಯಮಗಳಾಗಿ ಸ್ಟಾರ್ಟ್ಅಪ್ ಗಳ ಕಡೆಗೆ ಮುಂದುವರೆಯಬೇಕೆಂದು ವಿದ್ಯಾರ್ಥಿಗಳಿಗೆ ಉತ್ತೇಜಿಸಿದರು.

ಸೆ.19ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಬೆಂಗಳೂರಿನ ಗೇನ್‌ವೆಲ್ ಟೆಕ್ನಾಲಜೀಸ್‌ನ ಪ್ರಮುಖ ಉತ್ಪನ್ನ ಮುಖ್ಯಸ್ಥ ರಾಜೇಶ್ ಹಿರಿಯಣ್ಣ ಅಂತಿಮ ಸುತ್ತಿನ ತೀರ್ಪುಗಾರರಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕೃತಕ ಬುದ್ಧಿಮತ್ತೆ (AI) ಮತ್ತು ಮಾನವ ಸೃಜನಶೀಲತೆಯ ಸಮನ್ವಯದ ಮಹತ್ವವನ್ನು ಅವರು ವಿವರಿಸಿದರು. ವಿದ್ಯಾರ್ಥಿಗಳಿಗೆ ಕಲಿಕೆಗೆ ಆದ್ಯತೆ ನೀಡಲು ಮತ್ತು ಸಮಯವನ್ನು ಅರ್ಥಪೂರ್ಣವಾಗಿ ಬಳಸಲು ಸಲಹೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ 22 ತಂಡಗಳು ಬಾಗವಹಿಸಿದ್ದವು. ಪ್ರಾಂಶುಪಾಲರಾದ ಡಾ. ಅಶೋಕ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅವರು ವಿದ್ಯಾರ್ಥಿಗಳ ಭಾಗವಹಿಸುವಿಕೆ ಮತ್ತು ಆವಿಷ್ಕಾರ
ಮನೋಭಾವವನ್ನು ಪ್ರಶಂಸಿದರು. ಸಿವಿಲ್‌ವಿಭಾಗದ ಸಹ ಪ್ರಾದ್ಯಾಪಕರಾದ ವಿನಯ್ ಮತ್ತು ರಾಮಪ್ರಸಾದ್ ಕಾರ್ಯಕ್ರಮವನ್ನು ಸಂಘಟಿಸಿದರು.

Exit mobile version